ಕಾಸರಗೋಡು: ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ವಿಂಶತಿ ವರ್ಷಾಚರಣೆ ಅಂಗವಾಗಿ ನಡೆಯುವ 18ನೇ ಗುರು ನಮನ ರಂಗಭೂಮಿ ಉಡುಪಿ ಇದರ ಅಧ್ಯಕ್ಷ, ಲೇಖಕ, ರಂಗ ಕಲಾವಿದ, ಯಕ್ಷಗಾನ ಕಲಾವಿದ, ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ನಡೆಯಿತು.
ಕನ್ನಡ ಭವನ ಗ್ರಂಥಾಲಯದ ಗುರುನಮನ, ಗೌರವಾರ್ಪಣೆ ಉಡುಪಿ ಎಂ.ಜಿ.ಎಂ. ಕಾಲೇಜು ರಂಗ ಮಂಟಪದಲ್ಲಿ ನಡೆಯಿತು. ಕನ್ನಡ ಭವನ ಸಂಸ್ಥಾಪಕ ವಾಮನ್ ರಾವ್ ಬೇಕಲ್ ಹಾಗೂ ಕೋಶಾಧಿಕಾರಿ ಸಂಧ್ಯಾರಾಣಿ ಟೀಚರ್ ಡಾ.ತಲ್ಲೂರ್ ಶಿವರಾಮ ಶೆಟ್ಟಿ ಅವರಿಗೆ ಗುರು ನಮನ ಸಲ್ಲಿಸಿ ಗೌರವಿಸಿದರು. ಕನ್ನಡ ಭವನ ನಿರ್ದೇಶಕ, ವಿಶ್ರಾಂತ ಪ್ರಾಂಶುಪಾಲ ಪೆÇ್ರ.ಎ.ಶ್ರೀನಾಥ್ ಅಭಿನಂದನಾ ಬಾಷಣ ಮಾಡಿದರು. ಜಾನಪದ ಪರಿಷತ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದರು. ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪುನೀತ್ಚಂದ್ರ, ಜೊತೆ ಕಾರ್ಯದರ್ಶಿ ಮೇಟಿ ಮುದಿಯಪ್ಪ, ಶ್ರೀಪಾದ ಹೆಗಡೆ, ರಾಜೇಶ್, ನಿತಿನ್ ಪೆರಂಪಲ್ಲಿ ಶುಭಹಾರೈಸಿದರು. ಕನ್ನಡ ಭವನ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.