HEALTH TIPS

ಚಿಗುರುಪಾದೆಯಲ್ಲಿ ಯಕ್ಷಗಾನ ಅಕಾಡೆಮಿ ಪ್ರಾಯೋಜಿತ “ಹಿರಿಯರ ನೆನಪು”: ಮುಂದಿಲ ಕೃಷ್ಣ ಭಟ್ ಸಂಸ್ಮರಣೆ

     

                  ಮಂಜೇಶ್ವರ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಪ್ರಾಯೋಜಕತ್ವದಲ್ಲಿ ಶ್ರೀ ಗುರುನರಸಿಂಹ ಯಕ್ಷಬಳಗ ಮೀಯಪದವು ಇವರ ಆಶ್ರಯದಲ್ಲಿ “ಹಿರಿಯರ ನೆನಪು” ಕಾರ್ಯಕ್ರಮ ಇತ್ತೀಚೆಗೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.

                   ಸಮಾರಂಭದ ಭಾಗವಾಗಿ ಖ್ಯಾತ ಕೀರ್ತಿಶೇಷ ಕಲಾವಿದ ಮುಂದಿಲ ಕೃಷ್ಣ ಭಟ್ ಹಿರಿಯ ವೇಷಧಾರಿಗಳು  ಅವರ ಸಂಸ್ಮರಣೆ ನಡೆಯಿತು.

                  ದಾಮೋದರ ಶೆಟ್ಟಿ ಎಂ ಸದಸ್ಯರು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ರಾಜಾರಾಮ ರಾವ್ ಟಿ ಮೀಯಪದವು ಸದಸ್ಯರು ಗುರುನರಸಿಂಹ  ಯಕ್ಷಬಳಗ ಮೀಯಪದವು ಸಂಸ್ಮರಣಾ ಭಾಷಣವನ್ನು ಗೈದು ಮಾತನಾಡಿ “ ಮುಂದಿಲ ಕೃಷ್ಣ ಭಟ್ ಓರ್ವ ಸಮರ್ಥ ಕಿರೀಟ ವೇಷಧಾರಿ ಯಾಗಿ ಮೆರೆದವರು, ಶ್ರೀಯುತರ ಕಂಠಸಿರಿ, ರಂಗನಡೆ ಇಂದಿಗೂ ಅನುಕರಣೀಯ, ಹತ್ತುಹಲವು ಕಡೆ ಯಕ್ಷಗಾನ ನಾಟ್ಯ ತರಗತಿಗಳನ್ನು ನಡೆಸುತ್ತಿದ್ದ ಶ್ರೀಯುತರು ನೂರಾರು ಶಿಷ್ಯರನ್ನು ಹೊಂದಿದ್ದರು” ಎಂದರು.

                  ಕ್ಯಾಂಪ್ಕೋ ನಿರ್ದೇಶಕ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ವಸಂತ ಭಟ್ ತೊಟ್ಟೆತ್ತೋಡಿ ಆಡಳಿತ ಮೊಕ್ತೇಸರರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ, ವೇ.ಮೂ. ಗಣೇಶ ನಾವಡ ಅಧ್ಯಕ್ಷರು ಗುರುನರಸಿಂಹ ಯಕ್ಷಬಳಗ ಮೀಯಪದವು ಶ್ರೀ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಅಧ್ಯಕ್ಷರು  ಶ್ರೀ ಮಹಾಲಿಂಗೇಶ್ವರ ಸೇವಾಸಮಿತಿ ಚಿಗುರುಪಾದೆ, ದಿ.ಕೃಷ್ಣ ಭಟ್ಟರ ಸಹೋದರ ಮುಂದಿಲ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.

             ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್  ಚಿಗುರುಪಾದೆ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದಿಂದ ಗುರುದಕ್ಷಿಣೆ ಯಕ್ಷಗಾನ ತಾಳಮದ್ದಳೆ ಜರಗಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries