ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತ್ ನಲ್ಲಿ ಏಕೀಕೃತ ಸ್ಥಳೀಯಾಡಳಿತ ಘೋಷಣೆ ಹಾಗೂ ಸ್ಥಳೀಯಾಡಳಿತ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಟಿ.ಆರ್.ಕೆ ಭಟ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಯೋಜನಾ ಸಮಿತಿ ಉಪಾಧ್ಯಕ್ಷ ಅಲಿ ಮಾಸ್ತರ್ ವಿಷಯ ಮಂಡಿಸಿದರು. ಜಂಟಿ ಬಿಡಿಒ ಶ್ರೀಜಾ ಜಗದಾಂಬ, ಸ್ಥಾಯಿ ಸಮಿತಿ ಸದಸ್ಯರಾದ ಸರೋಜಾ ಆರ್.ಬಲ್ಲಾಳ್, ಎನ್.ಪಿ. ಅಬ್ದುಲ್ ಹಮೀದ್ ಮತ್ತು ಶಂಸೀನಾ ಅಬ್ದುಲ್ಲಾ ಮಾತನಾಡಿದರು. ಬಳಿಕ ರಾಜ್ಯಮಟ್ಟದ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಪಂಚಾಯತ್ ಡಿ ವಿಷನ್ ಸದಸ್ಯರು, ಸ್ಥಾಯಿ ಸಮಿತಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.