ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಯೋಜನೆಯಂತೆ ಎಸ್.ಟಿ. ವಿಭಾಗದವರಿಗೆ ಕುಡಿ ನೀರಿನ ಟ್ಯಾಂಕ್ ವಿತರಿಸಲಾಯಿತು. ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು.
ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಪಂ.ಸದಸ್ಯರಾದ ನರಸಿಂಹ ಪೂಜಾರಿ, ಮಹೇಶ್ ಭಟ್, ರಾಮಚಂದ್ರ ಎಂ, ಪಂಚಾಯತಿ ಸಹಾಯಕ ಕಾರ್ಯದರ್ಶಿ ವಿಪಿನ್, ಎಸ್.ಟಿ.ಪ್ರಮೋಟರ್ ಗಳು ಭಾಗವಹಿಸಿದ್ದರು.