ನವದೆಹಲಿ : ಹುರುನ್ ಇಂಡಿಯಾ ವೆಲ್ತ್ 2021 ವರದಿಯ ಪ್ರಕಾರ, ಭಾರತದಲ್ಲಿ ಒಂದು ಮಿಲಿಯನ್ ಡಾಲರ್ (ಸುಮಾರು 7 ಕೋಟಿ ರೂ) ಹೊಂದಿರುವ ಕುಟುಂಬಗಳ ಕಳೆದ ವರ್ಷಕ್ಕಿಂತ 11% ಏರಿಕೆಯಾಗಿದೆ.
ನವದೆಹಲಿ : ಹುರುನ್ ಇಂಡಿಯಾ ವೆಲ್ತ್ 2021 ವರದಿಯ ಪ್ರಕಾರ, ಭಾರತದಲ್ಲಿ ಒಂದು ಮಿಲಿಯನ್ ಡಾಲರ್ (ಸುಮಾರು 7 ಕೋಟಿ ರೂ) ಹೊಂದಿರುವ ಕುಟುಂಬಗಳ ಕಳೆದ ವರ್ಷಕ್ಕಿಂತ 11% ಏರಿಕೆಯಾಗಿದೆ.
ಹುರುನ್ ವರದಿಯ ಪ್ರಕಾರ, ಮುಂಬೈ ನಗರದಲ್ಲಿ ಅತಿ ಹೆಚ್ಚು ಕೋಟ್ಯಾಧೀಶರ ಕುಟುಂಬಗಳಿದ್ದು, ನಂತರದ ಸ್ಥಾನದಲ್ಲಿ ದೆಹಲಿ ಮತ್ತು ಕೋಲ್ಕತ್ತಾ ಇವೆ.
ಈ ವರ್ಷ ಇಂತಹ ಕುಟುಂಬಗಳ ಸಂಖ್ಯೆ 4.58 ಲಕ್ಷಕ್ಕೆ ಏರಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 11% ಹೆಚ್ಚಳವಾಗಿದೆ. 2026 ನೇ ಇಸವಿಗಾಗುವಾಗ ಈ ಸಂಖ್ಯೆಯಲ್ಲಿ 30% ಹೆಚ್ಚಳವಾಗಿ ಸುಮಾರು 6 ಲಕ್ಷ ಕುಟುಂಬಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎಂದು ವರದಿ ಹೇಳಿದೆ.
ಆದಾಗ್ಯೂ, ದೇಶದ ಸಂತೋಷ ಸೂಚ್ಯಂಕವು ಕುಸಿದಿದೆ ಎಂದು ಹುರುನ್ ವರದಿ ಹೇಳಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇಕಡಾ 66 ರಷ್ಟು ಜನರು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಂತೋಷವಾಗಿದ್ದಾರೆ ಎಂದು ಹೇಳಿದ್ದಾರೆ. 2020 ರಲ್ಲಿ ಇದು ಶೇಕಡಾ 72 ರಷ್ಟು ಇತ್ತು ಎಂದು ವರದಿ ತಿಳಿಸಿದೆ.