ಮುಂಬೈ: ಕುಡಿದು ವಾಹನ ಚಾಲನೆ ಮಾಡಿ ಖಾಸಗಿ ಆಸ್ತಿಗೆ ದಕ್ಕೆ ಮಾಡಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರನ್ನು ಮುಂಬೈ ಪೊಲೀಸರು ಭಾನುವಾರ ಸಂಜೆ ಬಂಧಿಸಿದ್ದಾರೆ.
ಕಾಂಬ್ಳಿ ತಾವು ವಾಸಿಸುವ ಮುಂಬೈನ ಬಾಂದ್ರಾದ ಮನೆಯೊಂದರ ಗೇಟ್‌ಗೆ ಕಾರ್ ಗುದ್ದಿಸಿ, ನಷ್ಟ ಮಾಡಿದ್ದ ಆರೋಪವನ್ನು ಎದುರಿಸುತ್ತಿದ್ದಾರೆ. ಅವರನ್ನು ಸದ್ಯಕ್ಕೆ ಜಾಮೀನಿನ ಮಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಸತಿ ಸಮುಚ್ಚಯದವರು ನೀಡಿದ ದೂರಿನ ಆಧಾರದಲ್ಲಿ ಕಾಂಬ್ಳಿ ಅವರ ಮೇಲೆ ಐಪಿಸಿ ಕಲಂ 279, 336 ಹಾಗೂ 427 ಅಡಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿನೋದ್ ಕಾಂಬ್ಳಿ ಅವರು ಕ್ರಿಕೆಟ್ ಟೀಂ ಇಂಡಿಯಾದಲ್ಲಿ 1991 ರಿಂದ 2000 ರವರೆಗೆ ಆಡಿದ್ದರು.