ಮುಳ್ಳೇರಿಯ: ಬೇಡಿಕೆಗೆ ಅನುಸರಿಸಿ ಅಡಕೆ, ಇತರ ಕೃಷಿ ಉತ್ಪನ್ನಗಳಿಗೆ ದರ ವ್ಯತ್ಯಯ ಸಾಮಾನ್ಯ. ವಿಯೆಟ್ನಾಂ ಇಂಡೋನೇಷಿಯಾ ಮೊದಲಾದ ರಾಷ್ಟ್ರಗಳಿಂದ ಶ್ರೀಲಂಕಾ ಮೂಲಕ ಕಳ್ಳ ಮಾರ್ಗದಲ್ಲಿ ಭಾರತಕ್ಕೆ ಭಾರಿ ಪ್ರಮಾಣದಲ್ಲಿ ಅಡಕೆ ಪೂರೈಕೆಯಾಗುತ್ತಿದ್ದುದು ಅಡಕೆ ಬೆಲೆ ಕುಸಿತಕ್ಕೆ ಕಾರಣವಾಗಿತ್ತು. ಕೃಷಿಕರ ಹಿತದೃಷ್ಟಿಯನ್ನು ಗಮನದಲ್ಲಿರಿಸಿದ ಕೇಂದ್ರ ಸರ್ಕಾರ ಇದನ್ನು ತಡೆದಿರುವುದು ಪ್ರಸ್ತುತ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಕ್ಯಾಂಪ್ಕೋ ಹಾಗೂ ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ಸಮೀಪ ಕ್ಯಾಂಪೆÇ್ಕ ಬೆಳ್ಳೂರು ನೂತನ ಶಾಖೆಯನ್ನು ಉದ್ಘಾಟಿಸಿದ ಬಳಿಕ ಬೆಳ್ಳೂರು ಶ್ರೀ ಮಹಾವಿಷ್ಣು ದೇವಳ ಪರಿಸರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಳ್ಳೂರು ಗ್ರಾ.ಪಂ.ಮಾಜಿ ಅಧ್ಯಕ್ಷ, ಹಿರಿಯ ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್ ಕುಂಜತ್ತೋಡಿ ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿ.ಎಸ್. ಸುಬ್ರಹ್ಮಣ್ಯ ಕಡಂಬಳಿತ್ತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಯಾಂಪೆÇ್ಕ ಅಡಕೆ ಬೆಳೆಗಾರರ ಹಿತದೃಷ್ಟಿ ಕಾಯ್ದುಕೊಳ್ಳಲು ಸ್ಥಾಪಿತವಾದ ಸಂಸ್ಥೆಯಾಗಿದ್ದು ಬೆಳೆಗಾರರು ಸಂಸ್ಥೆ ಮೂಲಕ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕ್ಯಾಂಪೆÇ್ಕ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಮಾತನಾಡಿ, ಕೃಷಿಕರ ಹಿತ ರಕ್ಷಣೆ ಉದ್ದೇಶದಿಂದ
ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಸಮಾನ ಮನಸ್ಕರನ್ನು ಒಗ್ಗೂಡಿಸಿ 1973ರಲ್ಲಿ ಸ್ಥಾಪಿತವಾದ ಕ್ಯಾಂಪೆÇ್ಕ ಇಂದು ಬಹುರಾಜ್ಯ ಸಹಕಾರಿ ಸಂಸ್ಥೆಯಾಗಿ ಬೆಳೆದಿದೆ. ಅಡಕೆ ಕೃಷಿಕರ ಜೀವನಾಡಿಯಾದ ಕ್ಯಾಂಪೆÇ್ಕ ಸದಾ ಬೆಳೆಗಾರರ ಮೇಲೆ ಬದ್ಧತೆ ಹೊಂದಿದೆ. ಬೆಳ್ಳೂರಿನಲ್ಲಿ ಆರಂಭವಾದ ಕ್ಯಾಂಪೆÇ್ಕ ಶಾಖೆಯನ್ನು ಸದೃಢಗೊಳಿಸುವ ಜವಾಬ್ದಾರಿ ಬೆಳ್ಳೂರಿನ ಕೃಷಿಕರ ಮೇಲಿದೆ. ಏಕ ಬೆಳೆ ಪದ್ಧತಿಯಿಂದ ಬೆಲೆ ಕುಸಿದಲ್ಲಿ ನಷ್ಟ ಸಾಧ್ಯತೆಯಿದ್ದು ಮಿಶ್ರ ಬೆಳೆ ಪದ್ಧತಿ ಅನುಸರಿಸಬೇಕು ಎಂದರು.
ಬೆಳ್ಳೂರು ಗ್ರಾ.ಪಂ.ಅಧ್ಯಕ್ಷ ಶ್ರೀಧರ ಎಂ.ಮಾತನಾಡಿ, ಕೃಷಿಕರು ಸರ್ಕಾರ ಅಥವಾ ಸಂಘ ಸಂಸ್ಥೆಗಳ ಯೋಜನೆಗಳ ಗರಿಷ್ಟ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಮಾಜಿ ಅಧ್ಯಕ್ಷ ಕಲ್ಲಗ ಚಂದ್ರಶೇಖರ ರಾವ್ ಮಾತನಾಡಿ, ಸಣ್ಣ ಮಟ್ಟಿನ ಕೃಷಿಕರಿಗೆ ಪ್ರಯೋಜನ ಲಭಿಸುವ ರೀತಿಯಲ್ಲಿ ಕಿರು ಯಂತ್ರೋಪಕರಣಳನ್ನು ಸಬ್ಸಿಡಿ ದರದಲ್ಲಿ ಕೃಷಿಕರಿಗೆ ಲಭಿಸುವಂತೆ ಮಾಡಲು ಕ್ಯಾಂಪೆÇ್ಕ ಶ್ರಮಿಸಬೇಕು ಎಂದರು.
ಸಿಪಿಎಂ ನೇತಾರ ಸೂಪಿ ಕೆ., ಐಯುಎಂಎಲ್ ಕಾರ್ಯದರ್ಶಿ ಸಂಶುದ್ದೀನ್, ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಂಜೀವ ಶೆಟ್ಟಿ, ಸಹಕಾರ ಭಾರತಿ ರಾಜ್ಯ ಸಮಿತಿ ಸದಸ್ಯ ಐತ್ತಪ್ಪ ಮವ್ವಾರ್, ಕ್ಯಾಂಪೆÇ್ಕ ಮಂಗಳೂರು ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಕೃಷ್ಣಕುಮಾರ್, ನಿರ್ದೇಶಕ ಸತ್ಯನಾರಾಯಣ ಪ್ರಸಾದ್, ಬಿಜೆಪಿ ಪಂಚಾಯಿತಿ ಸಮಿತಿ ಅಧ್ಯಕ್ಷ ಜಯಾನಂದ ಕುಳ, ಐಎನ್ ಸಿ ಬೆಳ್ಳೂರು ಮಂಡಲ ಅಧ್ಯಕ್ಷ ಪಿ.ಕೆ.ಶೆಟ್ಟಿ, ಶ್ರೀ ಮಹಾವಿಷ್ಣು ದೇವಳದ ಅಧ್ಯಕ್ಷ ಎ.ಬಿ.ಗಂಗಾಧರ ಬಲ್ಲಾಳ್ ಮಾತನಾಡಿದರು.
ಬೆಳ್ಳೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಮಾಲತಿ ಜೆ.ರೈ, ಹಿರಿಯ ಪ್ರಗತಿಪರ ಕೃಷಿಕರಾದ ಪ್ರಭಾಕರ ರಾವ್ ಬನಗದ್ದೆ, ಮನಮೋಹನ ರೈ ಪಿಂಡಗ, ಕೃಷ್ಣ ಮಲೆತ್ತಾಯ ಕೂಳೂರು, ಕ್ಯಾಂಪೆÇ್ಕ ನಿರ್ದೇಶಕರಾದ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಸುರೇಶ್ ಕುಮಾರ್ ಶೆಟ್ಟಿ, ಪದ್ಮರಾಜ ಪಟ್ಟಾಜೆ, ಬಾಲಕೃಷ್ಣ ರೈ, ಪ್ರಧಾನ ವ್ಯವಸ್ಥಾಪಕಿ ರೇಶ್ಮ ಮಲ್ಯ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ಳೂರು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಜಯಕರ ಎಂ.ಸ್ವಾಗತಿಸಿ, ಕಾರ್ಯದರ್ಶಿ ಉದಯ ಕುಮಾರ್ ನೆಟ್ಟಣಿಗೆ ವಂದಿಸಿದರು.ನಿರ್ದೇಶಕ ಸುಂದರ್ ರಾಜ್ ರೈ ನಿರೂಪಿಸಿದರು. ಮಧ್ಯಾಹ್ನ ಸದಸ್ಯ ಬೆಳೆಗಾರರ ಸಂವಾದ ಕಾರ್ಯಕ್ರಮ ನಡೆಯಿತು.