ನವದೆಹಲಿ: ವಿಶ್ವ ರೇಡಿಯೊ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರೇಡಿಯೊ ಕೇಳುಗರಿಗೆ ಶುಭಾಶಯ ಕೋರಿದ್ದಾರೆ. ರೇಡಿಯೊ ಈಗಲೂ ಜನರ ಜೀವನದ ಅವಿಭಾಜ್ಯ ಅಂಗವಾಗಿದ್ದು ಜನರನ್ನು ಸಂಪರ್ಕಿಸಲು ಇರುವ ಒಂದು ಅದ್ಭುತ ಮಾಧ್ಯಮವಾಗಿದೆ ಎಂದು ಬಣ್ಣಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2012ರಲ್ಲಿ ರೇಡಿಯೊ ದಿನವನ್ನು ಅಂತರರಾಷ್ಟ್ರೀಯ ದಿನವನ್ನಾಗಿ ಆಚರಿಸಲು ತೀರ್ಮಾನಿಸಿತು. ಫೆಬ್ರುವರಿ 13 ರಂದು ವಿಶ್ವ ರೇಡಿಯೊ ದಿನ ಆಚರಿಸಲಾಗುತ್ತದೆ.
'ಎಲ್ಲಾ ರೇಡಿಯೊ ಕೇಳುಗರು ಮತ್ತು ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯ ಅಭಿವ್ಯಕ್ತಿಗೆ ಈ ಮಾಧ್ಯಮವನ್ನು ಬಳಸಿಕೊಳ್ಳುತ್ತಿರುವ ಎಲ್ಲರಿಗೂ ವಿಶ್ವ ರೇಡಿಯೊ ದಿನದ ಶುಭಾಶಯಗಳು. ಜನರ ಮನೆ, ಪ್ರಯಾಣ ಮತ್ತು ದೈನಂದಿನ ಕಾರ್ಯಗಳಲ್ಲಿ ರೇಡಿಯೊ ಒಂದು ಅವಿಭಾಜ್ಯ ಅಂಗವಾಗಿದೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.