ನವದೆಹಲಿ: ಸೆರಿಬಿಯನ್ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಕೋವಿಡ್-19 ಲಸಿಕೆ ಪಡೆಯುವಂತೆ ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನಾವಾಲ ಗುರುವಾರ ಒತ್ತಾಯಿಸಿದ್ದಾರೆ.
20 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತ ನೊವಾಕ್ ಜೊಕೊವಿಕ್ ಇನ್ನೂ ಕೋವಿಡ್ ಲಸಿಕೆ ಪಡೆದಿಲ್ಲ. ಬಲವಂತದಿಂದ ಲಸಿಕೆ ತೆಗೆದುಕೊಳ್ಳುವುದಕ್ಕಿಂತ ಭವಿಷ್ಯದ ಲಸಿಕೆ ಟ್ರೋಫಿಯನ್ನು ಕಳೆದುಕೊಳ್ಳಲು ಅವರು ಸಿದ್ಧರಿರುವುದಾಗಿ ಹೇಳುತ್ತಾ ಬಂದಿದ್ದಾರೆ.
ಟೆನ್ನಿಸ್ ಆಟವಾಡುತ್ತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಪೂನಾವಾಲ. ಲಸಿಕೆ ಪಡೆಯದಿರುವ ನಿಮ್ಮ ವೈಯಕ್ತಿಕ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ ಮತ್ತು ನೀವು ಟೆನ್ನಿಸ್ ಆಡುವುದನ್ನು ಪ್ರೀತಿಸುತ್ತೇನೆ. ಆದರೆ, ನೀವು ಮನಸನ್ನು ಬದಲಾಯಿಸುವಿರಿ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಕಳೆದ ತಿಂಗಳು ಕೋವಿಡ್ ಲಸಿಕೆ ಪಡೆಯದ ಕಾರಣದಿಂದ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಟೂರ್ನಮೆಂಟ್ ನಿಂದ ಹೊರಗುಳಿದಿದ್ದರು.