ಬದಿಯಡ್ಕ: ಎಡನೀರು ಸಮೀಪದ ಪಾಡಿ ಕೈಲಾರ್ ಶ್ರೀಶಿವಕ್ಷೇತ್ರದಲ್ಲಿ ವಾರ್ಷಿಕ ಮಹಾಶಿವರಾತ್ರಿ ಆಚರಣೆ ಮತ್ತು ಏಕಾದಶ ರುದ್ರಾಭಿಶೇಕ ಮಾ. 1 ರಂದು ನಡೆಯಲಿದೆ.
ಶಿವರಾತ್ರಿ ಆಚರಣೆಯ ಅಂಗವಾಗಿ ನಡೆಯುವ ಸಂಕಲ್ಪಾಭಿಶೇಕ ಮತ್ತು ವಿಶೇಷ ಏಕಾದಶಿ ರುದ್ರಾಭಿಶೇಕದಲ್ಲಿ ಭಕ್ತಜನರು ಪಾಲ್ಗೊಂಡು ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸನ್ನಿಧಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಬಡೆಳಿಗ್ಗೆ 8ಕ್ಕೆ ಉಷಃಪೂಜೆ, 8.15 ರಿಂದ ರುದ್ರಪಾರಾಯಣ, 9.30 ಕ್ಕೆ ಸಂಕಲ್ಪಾಭಿಷೇಕ, ಏಕಾದಶ ರುದ್ರಾಭಿಷೇಕ, 10 ರಿಂದ ಪದ್ಮಪ್ರಿಯ ಭಜನಾ ಸಂಘ ಕಾಸರಗೋಡು ತಂಡದಿಂದ ಭಜನೆ, 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ. ರಾತ್ರಿ 8ಕ್ಕೆ ರಾತ್ರಿಪೂಜೆ ನಡೆಯಲಿದೆ.