HEALTH TIPS

ತಾಯಿಯ ಚಹಾದಂಗಡಿಯಲ್ಲಿ ಕೆಲಸ ಮಾಡುತ್ತಲೇ ʼನೀಟ್‌ʼನಲ್ಲಿ ಮೊದಲ ಯತ್ನದಲ್ಲೇ ಪಾಸ್‌ ಆದ ಯುವಕ

               ಬರ್ಪೇಟಾ : ತನ್ನ ತಾಯಿ ನಡೆಸುತ್ತಿದ್ದ ಚಹಾದಂಗಡಿಯಲ್ಲಿ ಗ್ರಾಹಕರಿಗೆ ಚಹಾ ನೀಡುವುದರ ಜೊತೆಗೆ ಕಲಿಕೆಯನ್ನೂ ನಿರ್ವಹಿಸುವುದು ಸುಲಭವಾದುದೇನಲ್ಲ. ಆದರೆ ಅಸ್ಸಾಂನ ಬರ್ಪೇಟಾ ಪಟ್ಟಣದ ವಿದ್ಯಾರ್ಥಿ ರಾಹುಲ್ ದಾಸ್ (24) ಇದನ್ನು ಸವಾಲಾಗಿ ಸ್ವೀಕರಿಸಿ, ಗೆದ್ದಿದ್ದಾನೆ.

               ಅಸ್ಸಾಂನ ಬಜಾಲಿ ಜಿಲ್ಲೆಯ ಚಹಾ ಮಾರಾಟಗಾರನಾದ ರಾಹುಲ್ದಾಸ್ ಕೊನೆಗೂ ವೈದ್ಯಕೀಯ ಶಿಕ್ಷಣಕ್ಕಾಗಿನ ಪ್ರವೇಶ ಪರೀಕ್ಷೆ ನೀಟ್ ನಲ್ಲಿ ಮೊದಲ ಯತ್ನದಲ್ಲೇ ಉತ್ತೀರ್ಣಗೊಂಡು ಸಾಧನೆ ಮಾಡಿದ್ದಾರೆ.

              ವೈದ್ಯಕೀಯ ವಿದ್ಯಾರ್ಥಿಯಾಗುವ ನಿಟ್ಟಿನಲ್ಲಿ ದಾಸ್ ನಡೆದ ಹಾದಿ ಸುಲಭವಾದುದಾಗಿರಲಿಲ್ಲ. ದಾಸ್ ನ ತಾಯಿಯನ್ನು ಆಕೆಯ ಪತಿ ಹನ್ನೊಂದು ವರ್ಷಗಳ ಹಿಂದೆಯೇ ತೊರೆದುಹೋಗಿದ್ದ. ಇದರಿಂದಾಗಿ ತನ್ನ ಇಬ್ಬರು ಪುತ್ರರನ್ನು ಆಕೆಯೇ ಹೊರಬೇಕಾಗಿತ್ತು.

             ಕಡುಬಡತನದ ಕಾರಣದಿಂದಾಗಿ ದಾಸ್ 12ನೇ ತರಗತಿಯಲ್ಲಿರುವಾಗಲೇ ಶಿಕ್ಷಣವನ್ನು ತ್ಯಜಿಸಿದ್ದ. ಆದರೆ ವೈದ್ಯನಾಗುವ ಕನಸನ್ನು ಮಾತ್ರ ಆತ ಇನ್ನೂ ಬಿಟ್ಟಿರಲಿಲ್ಲ. ತಾಯಿಯ ಚಹಾದಂಗಡಿಯಲ್ಲಿ ಗ್ರಾಹಕರಿಗೆ ಚಹಾ, ತಿಂಡಿ ನೀಡುವ ಜೊತೆಗೆ ಕಲಿಕೆಗೆ ಸಮಯವನ್ನು ಹೊಂದಿಸಿಕೊಳ್ಳುತ್ತಿದ್ದ.

           "ನಮಗಾಗಿ ನಮ್ಮ ತಾಯಿ ಕಷ್ಟಪಟ್ಟು ದುಡಿಯುತ್ತಿದ್ದುದನ್ನು ನಾನು ಕಂಡಿದ್ದೇನೆ. ಅಂಗಡಿಯಲ್ಲಿ ಸಹಾಯಕರನ್ನು ಕೂಡಾ ಇಟ್ಟುಕೊಳ್ಳಲು ಸಾಧ್ಯವಿಲ್ಲದಷ್ಟು ಆರ್ಥಿಕ ತೊಂದರೆಯಿತ್ತು. ಹೀಗಾಗಿ ಒಂದಲ್ಲ ಒಂದು ರೀತಿಯಲ್ಲಿ ಆಕೆಗೆ ನೆರವಾಗುತ್ತಿದ್ದೆ. ನಾನೇ ಚಹಾ ತಯಾರಿಸಿ ಅದನ್ನು ಮಾರುತ್ತಿದ್ದೆ. ಸಾಧ್ಯವಿದ್ದಾಗಲೆಲ್ಲಾ ಅಂಗಡಿಯಲ್ಲಿಯೇ ಕುಳಿತುಕೊಂಡು ಓದುತ್ತಿದ್ದೆ'' ಎಂದು ದಾಸ್ ಹೇಳುತ್ತಾನೆ

           ಆದರೆ ಉನ್ನತ ಶಿಕ್ಷಣವನ್ನು ಪಡೆಯುವ ಆತನ ಆಸೆ ಕಮರಿರಲಿಲ್ಲ. 12ನೇ ತರಗತಿಯಶಿಕ್ಷಣವನ್ನು ಮುಗಿಸಿದ ಎರಡು ವರ್ಷಗಳ ಬಳಿಕ ಆತ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ಸಂಸ್ಥೆಗೆ ಸೇರ್ಪಡೆಗೊಂಡ. ಇದಾರ ಎರಡು ವರ್ಷಗಳ ಆನಂತರ ಆತ ಪ್ಲಾಸ್ಟಿಕ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಗಳಿಸಿದ್ದ. 2020ರ ಅಕ್ಟೋಬರ್ನಲ್ಲಿ ಆತ ಶೇ.65 ಅಂಕಗಳೊಂದಿಗೆ ಉತ್ತೀರ್ಣಗೊಂಡಿದ್ದ ಹಾಗೂ ಎರಡು ವರ್ಷಗಳ ಆನಂತರ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ನೌಕರಿಗೆ ಸೇರ್ಪಡೆಗೊಂಡಿದ್ದ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries