ಕೊಟ್ಟಾಯಂ: ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯದ (ಎಂಜಿ) ಕೇಂದ್ರ ಕಛೇರಿಗೆ ಎಬಿವಿಪಿ ಕಾರ್ಯಕರ್ತರು ನಡೆಸಿದ ಮೆರವಣಿಗೆ ತಡೆಯಲು ಪೋಲೀಸರಿಂದ ಜಲಪಿರಂಗಿ ಪ್ರಯೋಗ ನಡೆದಿದೆ. ಪ್ರಮಾಣಪತ್ರ ನೀಡಲು ವಿದ್ಯಾರ್ಥಿಗಳಿಂದ ಲಂಚ ಸ್ವೀಕರಿಸಿದ ಆರೋಪದಲ್ಲಿ ಬಂಧಿತರಾಗಿರುವ ವಿಶ್ವವಿದ್ಯಾನಿಲಯದ ಸಹಾಯಕಿ ಹಾಗೂ ಸಹಚರರನ್ನು ವಜಾಗೊಳಿಸುವಂತೆ ಹಾಗೂ ಲಂಚ ಹಗರಣದ ಸಮಗ್ರ ತನಿಖೆಗೆ ಆಗ್ರಹಿಸಿ ಎಬಿವಿಪಿ ನಿನ್ನೆ ಪಾದಯಾತ್ರೆ ಪ್ರತಿಭಟನೆ ನಡೆಸಿತ್ತು.
ಪ್ರಚೋದನಕಾರಿಯಾಗಿ ಮೂಡಿಬಂದ ಭಾಷಣ, ಸಂಘರ್ಷ ಸೃಷ್ಟಿಗೆ ಕಾರಣವಾಯಿತು. ಬಳಿಕ ಕಾರ್ಯಕರ್ತರನ್ನು ಪೊಲೀಸರು ಜಲಪಿರಂಗಿ ಪ್ರಯೋಗಿಸಿ ಕಾರ್ಯಕರ್ತರನ್ನು ಬಂಧಿಸಲು ಪ್ರಯತ್ನಿಸಿದರು. ಜಲಫಿರಂಗಿಯೊಂದಿಗೆ ಮತ್ತು ಲಾಠಿಚಾರ್ಜ್ ಕೂಡ ನಡೆಸಲಾಯಿತು. ಮಹಿಳಾ ಕಾರ್ಯಕರ್ತರು ಸೇರಿದಂತೆ ಹಿಂಸಾಚಾರದಲ್ಲಿ ಅನೇಕರನ್ನು ಪೋಲೀಸರು ಬಂಧಿಸಿದರು. ಘಟನೆಯಲ್ಲಿ ಕಾರ್ಯಕರ್ತನೋರ್ವನ ತಲೆಗೆ ಗಂಭೀರವಾಗಿ ಗಾಯವಾಗಿದೆ.
ಪೋಲೀಸರ ಕ್ರಮವನ್ನು ವಿರೋಧಿಸಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ರಾಜ್ಯ ಕಾರ್ಯದರ್ಶಿ ಎನ್‍ಸಿಟಿ ಶ್ರೀಹರಿ, ಜಂಟಿ ಕಾರ್ಯದರ್ಶಿ ಗೋಕುಲ್ ಪ್ರಸಾದ್ ಮತ್ತು ಅರವಿಂದ್ ಸೇರಿದಂತೆ ಐವರು ಕಾರ್ಯಕರ್ತರು ಗಾಯಗೊಂಡು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಳಿಕ ಹೆಚ್ಚಿನ ಪೆÇಲೀಸರು ಆಗಮಿಸಿ ಕಾರ್ಯಕರ್ತರನ್ನು ಘರ್ಷಣೆ ನಿಯಂತ್ರಣಕ್ಕೆ ತಂದರು. ಸುಮಾರು 20 ಕಾರ್ಯಕರ್ತರನ್ನು ಬಂಧಿಸಲಾಗಿದೆ. ಲಂಚ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ ಧರಣಿ ಮುಂದುವರಿಸುವುದಾಗಿ ಎಬಿವಿಪಿ ಮುಖಂಡರು ತಿಳಿಸಿದ್ದಾರೆ. ರಾಜ್ಯ ಕಾರ್ಯದರ್ಶಿ ಎನ್‍ಸಿಟಿ ಶ್ರೀಹರಿ ಮೆರವಣಿಗೆ ಉದ್ಘಾಟಿಸಿದ್ದರು.