ಬದಿಯಡ್ಕ: ಅಧ್ಯಾತ್ಮವು ಪಾರಲೌಕಿಕತೆ ಎಡೆಗೆ ನಮ್ಮನ್ನು ಕೊಂಡೊಯ್ಯುವುದಾದರೆ ಸಾಂಸ್ಕøತಿಕತೆಯು ನಮ್ಮ ಐಹಿಕ ಬದುಕನ್ನು ಸಂಪನ್ನಗೊಳಿಸುತ್ತದೆ. ಸಂಗೀತವು ಕೇಳುಗರ ಮೇಲೆ ಅದ್ಭುತ ಪರಿಣಾಮ ಬೀರುವುದಲ್ಲದೆ, ಕೆಲವು ಮಾನಸಿಕ ರೋಗಗಳಿಗೂ ಸಂಗೀತವು ಥರೆಪಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಎಡನೀರು ಮಠಾದೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನವನ್ನು ನೀಡಿದರು.
ಬಳ್ಳಪದವು ನಾರಾಯಣೀಯಂ ಸಂಸ್ಥೆಯ `ವೀಣಾವಾದಿನೀ' ಸಂಗೀತ ವಿದ್ಯಾಲಯದಲ್ಲಿ ವೇದ-ನಾದ-ಯೋಗತರಂಗಿಣಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಅನುಗ್ರಹ ಭಾಷಣ ಮಾಡಿದರು.
ನಾರಾಯಣೀಯಂನಂತಹ ಸಂಸ್ಥೆ ಸಾಂಸ್ಕøತಿಕ ಲೋಕದಲ್ಲಿ ಉತ್ತಮ ಕೆಲಸಮಾಡುತ್ತಿದ್ದು, ಇದಕ್ಕೆ ಸರ್ಕಾರದ ಪ್ರೋತ್ಸಾಹವು ಲಭಿಸಬೇಕಿದೆ ಎಂದು ಉದುಮ ಕ್ಷೇತ್ರದ ಮಾಜಿ ಶಾಸಕ ಕೆ ಕುಂಞರಾಮನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಯಾಗಿ ಕರ್ನಾಟಕ ಉಚ್ಛನ್ಯಾಯಾಲಯದ ಕಾನೂನು ಸಲಹೆಗಾರ ನ್ಯಾಯವಾದಿ ಸನತ್‍ಕುಮಾರ್ ಎ. ಭಾಗವಹಿಸಿದ್ದರು. ವಾರ್ಷಿಕೋತ್ಸವದಂದು ಕೊಡಮಾಡುವ ವೀಣಾವಾದಿನೀ ಪುರಸ್ಕಾರವನ್ನು ಘಟಂ ಕಲಾವಿದ ವಿದ್ವಾನ್ ಮಾಂಜೂರು ಉಣ್ಣಿಕೃಷ್ಣನ್ ಹಾಗೂ ವಯೊಲಿನ್ ಕಲಾವಿದ ವಿದ್ವಾನ್ ಮಾಂಜೂರು ರೆಂಜಿತ್ ಅವರಿಗೆ ನೀಡಿ ಗೌರವಿಸಲಾಯಿತು. ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ, ಕವಿ, ಹಾಗೂ ಸಾಹಿತಿ ಡಾ. ವಸಂತ ಕುಮಾರ್ ಪೆರ್ಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬ್ರಹ್ಮಶ್ರೀ ಕೃಷ್ಣನ್ ನಂಬೂದಿರಿ ಮುಲ್ಲಪ್ಪಳ್ಳಿ ಶುಭಾಶಂಸನೆಗೈದರು. ಪ್ರವೀಣ್ ಕುಮಾರ್ ಮಾನಪತ್ರ ವಾಚಿಸಿ, ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ ಸ್ವಾಗತಿಸಿ, ವಿದ್ವಾನ್ ಪ್ರಭಾಕರ ಕುಂಜಾರು ವಂದಿಸಿದರು. ಇದೇ ಸಂದಭರ್Àದಲ್ಲಿ ವೀಣಾವಾದಿನಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಪಂಚರತ್ನ ಕೃತಿಯ ಆಲಾಪನೆ, ನಾದೋಪಾಸನಾ ಮತ್ತು ಹಿರಿಯ ವಿದ್ಯಾರ್ಥಿಗಳಿಂದ ಮುರಳೀರವಂ ಎಂಬ ಕಾರ್ಯಕ್ರಮ ಜರಗಿತು.
ಸಭಾಕಾರ್ಯಕ್ರಮದ ನಂತರ ಶೇಂಗೊಟ್ಟಿ ಹರಿಹರ ಸುಬ್ರಹ್ಮಣ್ಯಂ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಿತು. ವಯೊಲಿನ್‍ನಲ್ಲಿ ತಿರುವಿಳ ವಿಜು ಎಸ್ ಆನಂದ್, ಮೃದಂಗದಲ್ಲಿ ಕೊಚ್ಚಿನ್ ಬಾಲಕೃಷ್ಣ ಕಾಮತ್, ಘಟಂನಲ್ಲಿ ತ್ರಿಶ್ಯೂರ್ ಶ್ರೀಜಿತ್ ಸಹಕರಿಸಿದರು.