ತಿರುವನಂತಪುರ: ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಅತಿಕ್ರಮ ಪ್ರವೇಶ ಯತ್ನ ನಡೆದಿದೆ. ಘಟನೆಯಲ್ಲಿ ಪ್ಲಾವೂರು ಮೂಲದ ಬಿನು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೂವಾಚಲ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ.
ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ 53 ಶಾಲಾ ಕಟ್ಟಡಗಳ ಉದ್ಘಾಟನಾ ಸಮಾರಂಭ ನಡೆಯಿತು. ಮುಖ್ಯಮಂತ್ರಿ ಸ್ಥಳಕ್ಕಾಗಮಿಸಿದ ವೇಳೆ ಬಿನು ಅತಿಕ್ರಮ ಪ್ರವೇಶ ಮಾಡಿದರು.
ಯಾರೋ ಅನಿರೀಕ್ಷಿತವಾಗಿ ಸ್ಥಳಕ್ಕೆ ಪ್ರವೇಶಿಸುವುದನ್ನು ಕಂಡ ಪೊಲೀಸರು ಬಿನು ಅವರನ್ನು ತಡೆದರು. ಆದರೆ ಮುಖ್ಯಮಂತ್ರಿಯವರಲ್ಲಿ ಕೆಲವು ವಿಷಯ ಹೇಳಬೇಕಿತ್ತು ಎಂದು ಹೇಳಿ ಮತ್ತೆ ವೇದಿಕೆ ಏರಲು ಯತ್ನಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಿನು ಅವರನ್ನು ವಶಕ್ಕೆ ಪಡೆಯಲಾಗಿದೆ.