ಕಾಸರಗೋಡು: ಕೋವಿಡ್ ಹಿನ್ನೆಲೆಯಲ್ಲಿ ಜ. 21ರಿಂದ ಮುಚ್ಚುಗಡೆಗೊಂಡಿದ್ದ ಶಾಲಾ ತರಗತಿ ಸೋಮವಾರ ಪುನರಾರಂಭಗೊಂಡಿತು. ಅಂಗನವಾಡಿಯಿಂದ ತೊಡಗಿ ಒಂಬತ್ತರ ವರೆಗಿನ ತರಗತಿಯನ್ನು ಕೋವಿಡ್ ಮಾನದಂಡ ಪಾಲನೆಯೊಂದಿಗೆ ಪುನರಾರಂಭಿಸಲಾಗಿದೆ.
ಅಂಗನವಾಡಿಗಳಲ್ಲಿ ಪುಟಾಣಿಗಳ ಕಲವರವ ಮತ್ತೆ ಕಂಡುಬರಲಾರಂಭಿಸಿದೆ. ಮಕ್ಕಳನ್ನು ದೇಹದ ತಾಪಮಾನ ಪರೀಕ್ಷಿಸಿ ತರಗತಿಗೆ ಕೆರೆಸಿಕೊಳ್ಳಲಾಯಿತು. ಹಲವು ದಿವಸಗಳಿಂದ ಮನೆಯಲ್ಲೇ ಕಳೆಯುತ್ತಿದ್ದ ಮಕ್ಕಳು ಅಂಗನವಾಡಿಗಳಲ್ಲಿ ಕುಣಿದು ಕುಪ್ಪಳಿಸಿದರು. ಒಂದರಿಂದ ಒಂಬತ್ತರ ವರೆಗಿನ ಮಕ್ಕಳಿಗೆ ಎರಡು ಬ್ಯಾಚ್‍ಗಳಲ್ಲಾಗಿ ಬೆಳಗ್ಗಿಂದ ಮಧ್ಯಾಹ್ನ ವರೆಗೆ ಮಾತ್ರ ತರಗತಿ ನಡೆಯುತ್ತಿದ್ದು, ಫೆ.21ರಿಂದ ಸಂಜೆ ವರೆಗೂ ತರಗತಿ ನಡೆಸಲು ತೀರ್ಮಾನಿಸಲಾಗಿದೆ. ಸಾರ್ವತ್ರಿಕ ರಜೆಯ ಹೊರತಾಗಿ ಶನಿವಾರವೂ ತರಗತಿ ನಡೆಯಲಿರುವುದಾಗಿ ಶಿಕ್ಷಣ ಸಚಿವ ಎ.ಶಿವಂಕುಟ್ಟಿ ತಿಳಿಸಿದ್ದಾರೆ.