ಕಾಸರಗೋಡು: ಚೆಮ್ಮನಾಡು ಗ್ರಾಮ ಪಂಚಾಯತಿ ಮತ್ತು ಗ್ರೀನ್ ವಮ್ರ್ಸ್ ಜಂಟಿಯಾಗಿ ಕೀಜೂರು ಕಡಲತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಇತ್ತೀಚೆಗೆ ನಡೆಯಿತು.
ಕರಾವಳಿ ಭಾಗದಲ್ಲಿ ಹಿಂದಿನಿಂದಲೂ ತ್ಯಾಜ್ಯ ಸಮಸ್ಯೆ ಕಾಡುತ್ತಿದೆ. ಜಾಗೃತಿ ಅಭಿಯಾನವಾಗಿ ಸುಮಾರು 260 ಜನರನ್ನು ಒಳಗೊಂಡ 'ಸುಚಿತ್ವಸಾಗರಂ' ಎಂಬ ಬೀಚ್ ಸ್ವಚ್ಛತಾ ಕಾರ್ಯ ನಡೆಯಿತು. ಬೆಳಗ್ಗೆ 8 ಗಂಟೆಗೆ ಆರಂಭವಾದ ಸ್ವಚ್ಛತಾ ಕಾರ್ಯ ಮಧ್ಯಾಹ್ನ 2ರವರೆಗೆ ನಡೆಯಿತು. ಹಸಿರು ಕರ್ಮ ಸೇನೆಯ ಸದಸ್ಯರು, ಸಿಡಿಎಸ್ ಸದಸ್ಯರು, ಪಂಚಾಯತಿ ನೌಕರರು, ಚೆಮ್ಮನಾಡು ಜಮಾತ್ ಶಾಲೆಯ ಎನ್‍ಎಸ್‍ಎಸ್ ಸ್ವಯಂಸೇವಕರು ಹಾಗೂ ವಿವಿಧ ಕ್ಷೇತ್ರಗಳ ಉದ್ಯೋಗ ಖಾತ್ರಿ ಕಾರ್ಯಕರ್ತರು ಭಾಗವಹಿಸಿದ್ದರು. ಚೆಮ್ಮನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಬೈಜಾ ಅಬೂಬಕ್ಕರ್ ಉದ್ಘಾಟಿಸಿದರು. ಕರಾವಳಿ ಭಾಗದಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಸಮರ್ಥವಾಗಿ ಮಾಡಲು ಗ್ರಾಮ ಪಂಚಾಯಿತಿಯಲ್ಲಿ ಹಸಿರು ಕರ್ಮ ಸೇನೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಪಂಚಾಯಿತಿ ಅಧ್ಯಕ್ಷರು ತಿಳಿಸಿದರು. ಪಂಚಾಯತಿ ಉಪಾಧ್ಯಕ್ಷ ಇಬ್ರಾಹಿಂ ಮನ್ಸೂರ್ ಕುರುಕಳ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯೇಷಾ ಅಬೂಬಕರ್, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಮಾ ಗಂಗಾಧರನ್, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಶಂಸುದ್ದೀನ್ ತೆಕ್ಕಿಲ್, ಸಿಡಿಎಸ್ ಅಧ್ಯಕ್ಷೆ ಮುಮ್ತಾಝ್ ಅಬೂಬಕರ್ ಮಾತನಾಡಿದರು. ಪಂಚಾಯತ್ ಕಾರ್ಯದರ್ಶಿ ಸುರೇಂದ್ರನ್ ಸ್ವಾಗತಿಸಿ, ಗ್ರೀನ್ ವೇಸ್ ಪ್ರಾಜೆಕ್ಟ್ ಮುಖ್ಯಸ್ಥ ಶ್ರೀರಾಗ್ ಕುರುವತ್ ವಂದಿಸಿದರು.