ಪೆರ್ಲ: ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್)ಶಿಸ್ತುಬದ್ಧ ಜೀವನ, ದುಡಿಮೆಯ ಬಗ್ಗೆ ಪ್ರೀತಿ, ಶ್ರದ್ಧೆಯನ್ನು ಹೆಚ್ಚಿಸುವುದರ ಜತೆಗೆ ಜೀವನ ಪಾಠವನ್ನು ಬೋಧಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದಾಗಿ ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ. ಎಸ್ ಹೇಳಿದರು.
ಅವರು ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಗೆ ನೂತನಾಗಿ ಲಭಿಸಿದ ಎನ್ನೆಸ್ಸೆಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಪಠ್ಯದೊಂದಿಗೆ ಪಠ್ಯೇತರ
ಚಟುವಟಿಕೆಗೆ ಎನ್ನೆಸ್ಸೆಸ್ ಆದ್ಯತೆ ನೀಡುತ್ತದೆ. ಇದರಿಂದ ಶ್ರಮದಾನ, ಅಚ್ಚುಕಟ್ಟಾದ ಜೀವನ ವಿಧಾನಗಳನ್ನು ಕಲಿಯಲು ಸಹಕಾರಿ ಎಂದು ತಿಳಿಸಿದರು. ಎಣ್ಮಕಜೆ ಗ್ರಾಮ ಪಂಚಾಯತಿ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿಯ ಅಧ್ಯಕ್ಷೆ ಜಯಶ್ರೀಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಾರದಾಂಬಾ ಹಿರಿಯ ಪ್ರಾಥಮಿಕ ಶಾಲೆಯ ಪ್ರಬಂಧಕಿ, ಎಣ್ಮಕಜೆ ಗ್ರಾಪಂ ಮಾಜಿ ಅಧ್ಯಕ್ಷೆ ಶಾರದಾ ವೈ. 'ಹಸಿರುಯೋಜನೆ'ಯನ್ನು ಉದ್ಘಾಟಿಸಿದರು. ಎನ್ನೆಸ್ಸೆಸ್ ಕಾರ್ಯಕ್ಷಮತೆ ಮೌಲ್ಯಮಾಪನ ಸಮಿತಿಯ ಸದಸ್ಯ ಶ್ರೀನಾಥ್ ಇ, ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ಮಟ್ಟದ ಸಂಯೋಜಕ ಹರಿದಾಸ್ ವಿ, ಶೇಣಿ ಶ್ರೀ ಶಾರದಾಂಬಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಶ ಕುಮಾರ. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊೈದೀನ್ ಕುಟ್ಟಿ ಉಪಸ್ಥಿತರಿದ್ದರು. 'ಹಸಿರು ಯೋಜನೆ' ಅಂಗವಾಗಿ ಶಿಕ್ಷಕ ಶರತ್ಚಂದ್ರ ಶೆಟ್ಟಿ ಅವರಿಗೆ ಗಿಡವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಶೇಣಿ ಗ್ರಾಮವನ್ನು 'ಹಸಿರು ಗ್ರಾಮ'ವನ್ನಾಗಿ ಮಾಡುವ ಪಣ ತೊಡಲಾಯಿತು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲೆ ವಿಜಯಲಕ್ಷ್ಮಿ ಸ್ವಾಗತಿಸಿದರು. ಶಿಕ್ಷಕ ಅನೀಶ್ ಕುಮಾರ್ ನಿರೂಪಿಸಿದರು.ಎನ್ನೆಸ್ಸೆಸ್ ಯೋಜನಾಧಿಕಾರಿ ಸಂತೋಷ್ ಕುಮಾರ್ ಕ್ರಾಸ್ತ ವಂದಿಸಿದರು.