ತಿರುವನಂತಪುರ: ಕೊರೊನಾ ಮೂರನೇ ಅಲೆಯಿಂದಾಗಿ ಮುಚ್ಚಿದ್ದ ಶಾಲೆಗಳನ್ನು ಮತ್ತೆ ತೆರೆಯಲು ನಿರ್ಧರಿಸಲಾಗಿದೆ. ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯನ್ನು ಆನ್‌ಲೈನ್‌ನಲ್ಲಿ ನಡೆಸಲಾಗಿದೆ.
ಇದೇ 14ರಿಂದ ಶಾಲೆಗಳು ತೆರೆಯಲಿವೆ. ಕೊರೋನಾ ವಿಸ್ತರಣೆಯ ನಂತರ ಒಂದರಿಂದ ಒಂಬತ್ತನೇ ತರಗತಿಗಳನ್ನು ಮುಚ್ಚಲಾಗಿತ್ತು. ಕಾಲೇಜುಗಳು ಏಳನೇ ತಾರೀಖಿನಿಂದ ತೆರೆಯಲಿವೆ.