ನವದೆಹಲಿ: ಐಆರ್‌ಸಿಟಿಸಿ ಟಿಕೆಟ್‌ಗಳನ್ನು ಬುಕಿಂಗ್ ಮಾಡಲು ತನ್ನ ಹೊಸ ಅಪ್ಲಿಕೇಶನ್ 'ಕನ್‌ಫರ್ನ್ ಟಿಕೆಟ್' ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಮೊಬೈಲ್ ಅಪ್ಲಿಕೇಶನ್ ಅನ್ನು ವಿಶೇಷವಾಗಿ ತತ್ಕಾಲ್ ಬುಕಿಂಗ್‌ಗಾಗಿ ಪ್ರಾರಂಭಿಸಲಾಗುತ್ತದೆ.
ಅಮರ್ ಉಜಾಲಾ ವರದಿಯ ಪ್ರಕಾರ, ಪ್ರಯಾಣಿಕರು ಈಗ ತಮ್ಮ ಮನೆಯಲ್ಲಿಯೇ ಕುಳಿತು ತುರ್ತು ತುರ್ತು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. Confirm Ticket (ಕನ್ಫರ್ಮ್ ಟಿಕೆಟ್) ಅಪ್ಲಿಕೇಶನ್ ಪ್ರಯಾಣಿಕರಿಗೆ ವಿವಿಧ ರೈಲುಗಳ ಸೀಟ್ ಲಭ್ಯತೆಯನ್ನು ವೀಕ್ಷಿಸಲು ಅವಕಾಶ ನೀಡಿದೆ.
ಇದು ನಿರ್ದಿಷ್ಟ ಮಾರ್ಗದಲ್ಲಿ ಲಭ್ಯವಿರುವ ಎಲ್ಲಾ ತತ್ಕಾಲ್ ಟಿಕೆಟ್‌ಗಳನ್ನು ಸಹ ತೋರಿಸುತ್ತದೆ. ಈ ಅಪ್ಲಿಕೇಶನ್‌ನಲ್ಲಿ ವಿವರಗಳನ್ನು ಪಡೆಯಲು ಪ್ರಯಾಣಿಕರು ಇನ್ನು ಮುಂದೆ ರೈಲು ಸಂಖ್ಯೆಗಳನ್ನು ನಮೂದಿಸುವ ಅಗತ್ಯವಿಲ್ಲ. ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇನ್ನು Confirm Ticket ಅಪ್ಲಿಕೇಶನ್ ಉಚಿತ ಟಿಕೆಟ್ ರದ್ದತಿ ಸೌಲಭ್ಯವನ್ನು ಸಹ ಅವಕಾಶ ನೀಡಿದೆ. ವೈಯಕ್ತಿಕ ಮಾಹಿತಿಯನ್ನು ಉಳಿಸಲು ಅವಕಾಶ:
ವರದಿಯ ಪ್ರಕಾರ, ಲಾಗಿನ್ ಮಾಡುವಾಗ ವೈಯಕ್ತಿಕ ಮಾಹಿತಿಯನ್ನು ಉಳಿಸಲು ಅಪ್ಲಿಕೇಶನ್ ಅವಕಾಶ ನೀಡಲಿದೆ. ಪ್ರಯಾಣಿಕರು ಇದನ್ನು ಮಾಡುವುದರಿಂದ ಸಾಕಷ್ಟು ಸಮಯವನ್ನು ಉಳಿಸಲು ಸಾಧ್ಯ. ಪ್ರತಿ ಬಾರಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀವು ನಮೂದಿಸಬೇಕಾಗಿಲ್ಲ.
ಮಾಹಿತಿಯನ್ನು ಮರು-ನಮೂದಿಸುವ ಅಗತ್ಯವಿಲ್ಲ.
ಆದಾಗ್ಯೂ, ತತ್ಕಾಲ್ ಸೀಟುಗಳ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ವೇಟಿಂಗ್ ಲೀಸ್ಟ್‌ನಲ್ಲಿ ಟಿಕೆಟ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ಪಾವತಿ ಮಾಡಿದ ನಂತರ ಟಿಕೆಟ್ ಲಭ್ಯವಾದರೆ, ಟಿಕೆಟ್ ಕನ್ಫರ್ಮ್ ಆಗುತ್ತದೆ. ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಲಭ್ಯ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಮತ್ತು ಐಆರ್‌ಸಿಟಿಟಿ ನೆಕ್ಸ್ಟ್ ಜನರೇಷನ್ ಆಪ್ ಮೂಲಕ ಡೌನ್‌ಲೋಡ್ ಮಾಡಬಹುದು. ಐಆರ್‌ಸಿಟಿಸಿ ವೆಬ್‌ಸೈಟ್ www.irctc.co.in ನಲ್ಲಿಯೂ ವಿವರಗಳನ್ನು ನಮೂದಿಸಲಾಗಿದೆ. ಅಪ್ಲಿಕೇಶನ್ ಮೂಲಕ ತತ್ಕಾಲ್ ಟಿಕೆಟ್‌ಗಳಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ.
ರೈಲಿನಲ್ಲಿ ಟಿಕೆಟ್ ಇಲ್ಲದೆ 1.7 8 ಕೋಟಿಗೂ ಅಧಿಕ ಮಂದಿ ಪ್ರಯಾಣ ಕಳೆದ ಒಂದು ವರ್ಷದಲ್ಲಿ ರೈಲಿನಲ್ಲಿ ಟಿಕೆಟ್ ಇಲ್ಲದೆ 1.7 8 ಕೋಟಿಗೂ ಅಧಿಕ ಮಂದಿ ಪ್ರಯಾಣಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಏಪ್ರಿಲ್ 2020 ಮತ್ತು ಮಾರ್ಚ್ 2021 ರ ನಡುವೆ ಅಂದರೆ 2020-21 ರ ಹಣಕಾಸು ವರ್ಷದಲ್ಲಿ, 27.57 ಲಕ್ಷ ಜನರು ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಮತ್ತು 143.82 ಕೋಟಿ ರೂ.ಗಳನ್ನು ದಂಡವಾಗಿ ಪಾವತಿಸಲಾಗಿದೆ.
ರೈಲ್ವೆಯ ಅಂಕಿ ಅಂಶಗಳ ಪ್ರಕಾರ, 2019-2020 ರಿಂದ 2021-22 ರವರೆಗೆ ರೈಲು ಸೇವೆಗಳನ್ನು ಪಡೆಯುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಅಕ್ಟೋಬರ್ 2019 ರಲ್ಲಿ ನಿಯಮಿತ ರೈಲು ಸೇವೆಗಳು ಕಾರ್ಯನಿರ್ವಹಿಸುತ್ತಿದ್ದಾಗ, ರೈಲುಗಳಲ್ಲಿ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ 4.40 ಕೋಟಿ ಇತ್ತು. ಸೆಪ್ಟೆಂಬರ್ 2021 ರಲ್ಲಿ, COVID-19 ಪರಿಸ್ಥಿತಿಯಲ್ಲಿ ಸುಮಾರು ಏಳು ಕೋಟಿಗೆ ಏರಿತು ಎಂದು ಇಲಾಖೆ ಮಾಹಿತಿ ನೀಡಿದೆ.
2020-21 ರ ಕೊರೊನಾ ನಿರ್ಬಂಧದ ವೇಳೆ ಇಂಥಹ ಪ್ರಯಾಣಿಕರ ಸಂಖ್ಯೆ 27 ಲಕ್ಷದಷ್ಟಿತ್ತು. ಮಧ್ಯಪ್ರದೇಶ ಮೂಲದ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಸಲ್ಲಿಸಿದ ಆರ್‌ಟಿಐ ಪ್ರಶ್ನೆಗೆ ರೈಲ್ವೆ ಮಂಡಳಿಯು ಈ ಮಾಹಿತಿಯನ್ನು ನೀಡಿದೆ. ಹಾಗೆಯೇ ಈ ಡಾಟಾದಲ್ಲಿ ಏಪ್ರಿಲ್-ಡಿಸೆಂಬರ್ 2021 ರ ಅವಧಿಯಲ್ಲಿ 1.78 ಕೋಟಿಗೂ ಹೆಚ್ಚು ಪ್ರಯಾಣಿಕರು ಟಿಕೆಟ್ ಇಲ್ಲದೆ/ಅಸಮರ್ಪಕ ಟಿಕೆಟ್ ಮತ್ತು ಕಾಯ್ದಿರಿಸದ ಲಗೇಜ್‌ನೊಂದಿಗೆ ಪ್ರಯಾಣಿಸಿದ ಮಾಹಿತಿಯನ್ನೂ ನೀಡಲಾಗಿದೆ.