ಕೊರೋನಾ (Corona) ಸಾಂಕ್ರಾಮಿಕ ಮುಗಿಯುವವರೆಗೂ ಒಂದಲ್ಲ ಒಂದು ಹೊಸ ಆವಿಷ್ಕಾರಗಳು (New invention) ಹುಟ್ಟಿ ಕೊಳ್ಳುತ್ತಲೇ ಇರುತ್ತವೆ. ಕೊರೋನಾ ಸೋಂಕನ್ನು ಬೇರು ಸಮೇತ ತೆಗೆದು ಹಾಕಲು ವಿಜ್ಞಾನಿಗಳು, ತಜ್ಞರು ರೋಗದ ವಿರುದ್ಧ ಹೋರಾಡುವ ಅನೇಕ ಹೊಸ ಆವಿಷ್ಕಾರಗಳನ್ನು ಕಂಡು ಹಿಡಿಯುತ್ತಿದ್ದಾರೆ. ಲಸಿಕೆ, ಮಾಸ್ಕ್ ಸೇರಿ ರೋಗದ ವಿರುದ್ಧ ಹೋರಾಡುವ ಹಲವು ಆವಿಷ್ಕಾರಗಳ ಪ್ರಯತ್ನ ನಡೆಯುತ್ತಿದೆ. ಕೋವಿಡ್-19 ಮತ್ತು ಅದರ ರೂಪಾಂತರಿ ಓಮಿಕ್ರಾನ್ ಜನರ ಜೀವದ ಜೊತೆ ಆಟವಾಡುತ್ತಿವೆ. ಕೋವಿಡ್ ಮತ್ತು ಓಮಿಕ್ರಾನ್ (Omicron) ವಿರುದ್ದ ಹೋರಾಡಲು ಈಗಾಗಲೇ ಕೈಗೊಂಡಿರುವ ಲಸಿಕೆ ಅಭಿಯಾನ ಭಾರತದಲ್ಲಿ ಯಶಸ್ವಿಯಾಗಿ ಸಾಗಿದೆ. ಆದರೆ ಪ್ರಸ್ತುತ ಕೋವಿಡ್-19 ರೂಪಾಂತರಿಗಳ ವಿರುದ್ಧ ಹೋರಾಡುವ ಹೊಸ ಆಂಟಿವೈರಲ್ ಬಗ್ಗೆ IISc ಬೆಂಗಳೂರು (Bengaluru) ವರದಿ ಮಾಡಿದೆ.
ಕೋವಿಡ್-19 ಸಾಂಕ್ರಾಮಿಕ ತೀವ್ರತೆಯು ಅದರ ನಿರ್ವಹಣೆಗಾಗಿ ಹೊಸ ಆಂಟಿವೈರಲ್‌ಗಳ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಪಿಕೋಲಿನಿಕ್ ಆಮ್ಲ ಬಳಸಿಕೊಂಡು ಹೊಸ ಆಂಟಿವೈರಲ್ ಅಭಿವೃದ್ಧಿ ಪಡಿಸುವ ಬಗ್ಗೆ ಹೇಳಿಕೆ ನೀಡಿದೆ. IIScಯ ಆಂಟಿವೈರಲ್ ಲ್ಯಾಬ್‌ನ ವೈರಾಲಜಿಸ್ಟ್‌ಗಳು ಹೆಚ್ಚಿನ ಪ್ರತಿರೋಧಶಕ್ತಿ ಹೊಂದಿರುವ ಆಂಟಿವೈರಲ್ ಈ ಪಿಕೋಲಿನಿಕ್ ಆಮ್ಲದ ಬಗ್ಗೆ ವರದಿ ಮಾಡಿದ್ದಾರೆ. ಹೊಸ ಆಂಟಿವೈರಲ್‌ಗಳ ಆವಿಷ್ಕಾರ
ಪಿಕೋಲಿನಿಕ್ ಆಮ್ಲ (PA) – ಮಾನವರಲ್ಲಿ ಮತ್ತು ಇತರ ಸಸ್ತನಿಗಳಲ್ಲಿ ಅಂತರ್ವರ್ಧಕವಾಗಿ ಉತ್ಪತ್ತಿಯಾಗುತ್ತದೆ. ಪಿಕೋಲಿನಿಕ್ ಆಮ್ಲವು ವಿಶಾಲ-ಸ್ಪೆಕ್ಟ್ರಮ್ ಆಂಟಿವೈರಲ್ ಹೊಂದಿದ್ದು, SARS-CoV-2 ಸೇರಿದಂತೆ ಅದರ ರೂಪಾಂತರಿ ವೈರಸ್‌ಗಳಾದ ಇನ್ಫ್ಲುಯೆನ್ಸ ಎ ವೈರಸ್ (IAV), ಫ್ಲೇವಿವೈರಸ್ಗಳು, ಹರ್ಪಿಸ್ ಸಿಂಪ್ಲೆಕ್ಸ್ ವೈರಸ್,ಮತ್ತು ಮಾನವ ಪ್ಯಾರೆನ್ಫ್ಲುಯೆನ್ಜಾ ವೈರಸ್ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದಾರೆ.
ಮಾನ್ಸಿ ಶರ್ಮಾ, ರಾಜೇಶ್ ಯಾದವ್, ಅಭಿಜಿತ್ ಬಿಜಿ, ಒಯಾಹಿಡಾ ಖತುನ್, ಪಲ್ಲವಿ ರಾಜ್ ಶರ್ಮಾ,ಪ್ರಿಯಾ ರಾಣಿ, ಸೌಮಿತ್ರ ದಾಸ್, ಮತ್ತು ರಚಿತ್ ಅಗರ್ವಾಲ್ ಸೇರಿ ವಿವಿಧ IISc ಲ್ಯಾಬ್‌ಗಳ ವರದಿಗಾರರು ಮತ್ತು ಆಂಧ್ರಪ್ರದೇಶ ವಿಶ್ವವಿದ್ಯಾಲಯದ ಸಿ.ದುರ್ಗಾ ರಾವ್, ಹೊಸ ಆಂಟಿವೈರಲ್ ಪಿಕೋಲಿನಿಕ್ ಆಮ್ಲ ಪರಿಣಾಮಕಾರಿಯಾಗಿ ತೋರುತ್ತಿದೆ ಎಂದು ಹೇಳಿದ್ದಾರೆ. ತ್ರಿಪಾಠಿ ಮಾತನಾಡಿ ಪಿಕೋಲಿನಿಕ್ ಆಮ್ಲ ಬಳಸಿಕೊಂಡು ತಯಾರಿಸುವ ಆ್ಯಂಟಿವೈರಲ್ ಕುರಿತಾದ ಸಂಶೋಧನಾ ಕಾರ್ಯ ಪ್ರಾರಂಭವಾಗಿದೆ ಎಂದು ಹೇಳಿದರು.
ಇತರೆ ವೈರಸ್‌ಗಳ ವಿರುದ್ಧ ಹೋರಾಡುತ್ತೆ
ಪಿಕೋಲಿನಿಕ್ ಆಮ್ಲ ಎಂಬುದು ಟ್ರಿಪ್ಟೊಫಾನ್‌ನ ಉಪಉತ್ಪನ್ನವಾಗಿದೆ (ಪ್ರೋಟೀನ್‌ಗಳ ಜೈವಿಕ ಸಂಶ್ಲೇಷಣೆ ಅಮಿನೋ ಆಮ್ಲವನ್ನು ಬಳಸಲಾಗುತ್ತದೆ,)ಬಹುವಿಧದ ರೋಗದ ವಿರುದ್ಧ PAಯ ವಿಶಾಲ-ಸ್ಪೆಕ್ಟ್ರಮ್ ಆಂಟಿವೈರಲ್ ಇತರೆ ವೈರಸ್‌ಗಳ ವಿರುದ್ಧ ಹೋರಾಡುತ್ತವೆ ಇದನ್ನು ಅಭಿವೃದ್ದಿ ಪಡಿಸುವ ಅಗತ್ಯತೆ ಹೆಚ್ಚಿದೆ ಎಂದು ವಿಜ್ಞಾನಿಗಳು ಹೇಳಿದರು.
ನಾವು ಪ್ರಾಣಿಗಳ ಮಾದರಿಗಳನ್ನು ಸಹ ಬಳಸಿಕೊಂಡು SARS-CoV-2 ಮತ್ತು IAV ವಿರುದ್ಧ PA ಎಷ್ಟು ಪರಿಣಾಮಕಾರಿಯಾಗಿದೆ ಎಂಬುವುದನ್ನು ಕಂಡುಕೊಳ್ಳುತ್ತಿದ್ದೇವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ವಿಜ್ಞಾನಿಗಳಿಂದ ಹೊಸ ಹೊಸ ಪ್ರಯೋಗ
ವಿಶೇಷವಾಗಿ ರೋಗನಿರೋಧಕವಾಗಿ ಪಿಕೋಲಿನಿಕ್ ಆಮ್ಲವು ದೇಹವನ್ನು ಸೇರುವ ವೈರಸ್ ಅನ್ನು ಯಶಸ್ವಿಯಾಗಿ ತಡೆಯುತ್ತದೆ ಎಂದು ಈವರೆಗಿನ ಅಧ್ಯಯನಗಳು ಬಹಿರಂಗಪಡಿಸಿದ್ದಾವೆ ಎಂದು ಬೆಂಗಳೂರು ವಿಜ್ಞಾನಿಗಳು ತಿಳಿಸಿದ್ದಾರೆ.
ಪ್ರಾಥಮಿಕವಾಗಿ ವೈರಲ್ ಸೆಲ್ಯುಲಾರ್ ಮೆಂಬರೇನ್ ಸಮ್ಮಿಳನಕ್ಕೆ ಅಡ್ಡಿಪಡಿಸುವ ಮೂಲಕ, ವೈರಸ್-ಮಧ್ಯಸ್ಥಿಕೆಯನ್ನು ಪ್ರತಿಬಂಧಿಸುತ್ತದೆ. ಸಿನ್ಸಿಟಿಯಾ ರಚನೆ ಮತ್ತು ಸೆಲ್ಯುಲಾರ್ ಅನ್ನು ಅನಿಯಂತ್ರಿತಗೊಳಿಸುವುದು ಎಂದು ಲ್ಯಾಬ್ ಎಂಡೋಸೈಟೋಸಿಸ್ ವರದಿಗರಾರು ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಪಿಕೋಲಿನಿಕ್ ಆಮ್ಲವು(PA) ವಿಶಾಲ-ಸ್ಪೆಕ್ಟ್ರಮ್ ಆಂಟಿವೈರಲ್ ಏಜೆಂಟ್ ಭರವಸೆಯೊಂದಿಗೆ ಸಾಂಕ್ರಾಮಿಕ ವೈರಸ್‌ಗಳಾದ SARSCoV-2 ಮತ್ತು IAV ವಿರುದ್ಧ ಪರಿಣಾಮಕಾರಿಯಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಪಿಕೋಲಿನಿಕ್ ಆಮ್ಲದ ಮೂಲಕ ಹೊಸ ಆ್ಯಂಟಿ ವೈರಲ್ ಅಭಿವೃದ್ಧಿ ಪಡಿಸುವ ಸಲುವಾಗಿ ಈಗಾಗ್ಲೇ ಪೇಟೆಂಟ್ ಪಡೆಯಲಾಗಿದೆ ಎಂದು IISc ವಿಜ್ಞಾನಿಗಳು ಹೇಳಿದ್ದಾರೆ.