ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಯಲ್ಲಿ ಶೇಕಡಾ 57.79 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಯಲ್ಲಿ ಶೇಕಡಾ 57.79 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
'ಪ್ರಾಥಮಿಕ ವರದಿಗಳ ಪ್ರಕಾರ ಮೊದಲ ಹಂತದಲ್ಲಿ ಸಂಜೆ 5 ಗಂಟೆಯವರೆಗೆ 57.79 ಶೇಕಡಾ ಮತದಾನವಾಗಿದೆ. ಆದರೂ ಕೆಲವು ಮತಗಟ್ಟೆಗಳ ಅಂಕಿಅಂಶಗಳನ್ನು ಸೇರಿಸಲು ಸಯಮ ಬೇಕಾಗುತ್ತದೆ' ಎಂದು ಆಯೋಗ ತಿಳಿಸಿದೆ.
ಆಗ್ರಾ ಶೇ 56.52, ಅಲಿಗಢ ಶೇ 57.25, ಬಾಗ್‌ಪತ್ ಶೇ 61.25, ಬುಲಂದ್‌ಶಹರ್ ಶೇ 60.57, ಗೌತಮ್ ಬುದ್ಧ ನಗರ ಶೇ 53.48, ಘಾಜಿಯಾಬಾದ್ ಶೇ 52.43, ಹಾಪುರ್ ಶೇ 60.53, ಮಥುರಾ ಶೇ.58.12, ಮೀರತ್ ಶೇ 58.23, ಮುಜಫ್ಪರನಗರ ಶೇ62.09, ಶಾಮ್ಲಿಯಲ್ಲಿ ಶೇಕಡಾ 61.75 ರಷ್ಟು ಮತದಾನವಾಗಿದೆ ಎಂದು ಅಂಕಿಅಂಶಗಳಿಂದ ಗೊತ್ತಾಗಿದೆ.
ಉತ್ತರ ಪ್ರದೇಶ ವಿಧಾನಸಭೆಯ ಒಟ್ಟು 403 ಸ್ಥಾನಗಳಿಗೆ ಏಳು ಹಂತದ ಮತದಾನ ನಿಗದಿಯಾಗಿದೆ. ಮೊದಲ ಹಂತದ 58 ಸ್ಥಾನಗಳಿಗೆ ಗುರುವಾರ ಮತದಾನ ನಡೆಯಿತು.