ನವದೆಹಲಿ: ಫೆಬ್ರವರಿ 1 ಮತ್ತು ಮಾರ್ಚ್ 11 ರ ನಡುವೆ ಸುಮಾರು 22,500 ಭಾರತೀಯರು ಉಕ್ರೇನ್ನಿಂದ ತಾಯ್ನಾಡಿಗೆ ಮರಳಿದ್ದಾರೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿ ಕೆ ಸಿಂಗ್ ಸೋಮವಾರ ಹೇಳಿದ್ದಾರೆ.
ಫೆಬ್ರವರಿ 24 ರಂದು ರμÁ್ಯ ಆಕ್ರಮಣದ ನಂತರ ಉಕ್ರೇನಿಯನ್ ವಿಮಾನ ಪ್ರಾಧಿಕಾರ ನಾಗರಿಕ ವಿಮಾನಗಳಿಗಾಗಿ ಅಲ್ಲಿನ ವಿಮಾನ ನಿಲ್ದಾಣವನ್ನು ಮುಚ್ಚಿತ್ತು. ಉಕ್ರೇನ್ ನೆರೆಯ ರಾಷ್ಟ್ರ ಪೆÇಲೆಂಡ್, ರೊಮಾನಿಯಾ ಮತ್ತು ಹಂಗೇರಿಯಾದಿಂದ ಫೆಬ್ರವರಿ 26 ರಿಂದ ಭಾರತೀಯರ ಸ್ಥಳಾಂತರ ಪ್ರಕ್ರಿಯೆಯನ್ನು ಆರಂಭಿಸಲಾಯಿತು. 14 ಐಎಎಫ್ ವಿಮಾನಗಳು ಸೇರಿದಂತೆ ಒಟ್ಟಾರೇ ಸುಮಾರು 90 ವಿಮಾನಗಳು ಆಫರೇಷನ್ ಗಂಗಾದಡಿ ಕಾರ್ಯಾಚರಣೆ ನಡೆಸಿರುವುದಾಗಿ ಸಚಿವರು ತಿಳಿಸಿದ್ದಾರೆ.
ಫೆಬ್ರವರಿ 1 ರಿಂದ ಮಾರ್ಚ್ 11, 2022 ರವರೆಗೆ ಸುಮಾರು 22,500 ಭಾರತೀಯರು ಉಕ್ರೇನ್‍ನಿಂದ ಭಾರತಕ್ಕೆ ಮರಳಿದ್ದಾರೆ" ಎಂದು ರಾಜ್ಯಸಭೆಗೆ ಲಿಖಿತ ರೂಪದಲ್ಲಿ ಸಿಂಗ್ ವಿವರಿಸಿದರು
ಆಪರೇಷನ್ ಗಂಗಾ ಕಾರ್ಯಾಚರಣೆಯಡಿ ಕಾರ್ಯನಿರ್ವಹಿಸುವ ಎಲ್ಲಾ ವಿಮಾನಗಳ ವಿಮಾನ ದರವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸುತ್ತಿದೆ ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಹಾಕಿಲ್ಲ ಎಂದು ಅವರು ಹೇಳಿದ್ದಾರೆ.