ಮುಳ್ಳೇರಿಯ: ಬಂದಡ್ಕದ ಶ್ರೀ ರಾಮನಾಥ ದೇವಳದಲ್ಲಿ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಎ.1 ರಿಂದ 6 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಎ.1 ರಂದು ಮಧ್ಯಾಹ್ನ 12.10 ರಿಂದ ಶ್ರೀ ಗಣಪತಿ ಪ್ರಾರ್ಥನೆಯೊಂದಿಗೆ ಉಗ್ರಾಣ ತುಂಬಿಸುವುದು, ಅಪರಾಹ್ನ 4.30 ಕ್ಕೆ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರನ್ನು ಮತ್ತು ಬ್ರಹ್ಮಶ್ರೀ ಇರಿವೈಲು ಐ.ಕೆ.ಕೇಶವ ತಂತ್ರಿವರ್ಯರು, ಬ್ರಹ್ಮಶ್ರೀ ಐ.ಕೆ.ಪದ್ಮನಾಭ ತಂತ್ರಿವರ್ಯರು, ಬ್ರಹ್ಮಶ್ರೀ ಐ.ಕೆ.ಕೃಷ್ಣದಾಸ್ ತಂತ್ರಿವರ್ಯರು ಮತ್ತು ಪರಿವಾರದವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು. ಸಂಜೆ 6 ರಿಂದ ಸಮೂಹ ಪ್ರಾರ್ಥನೆ, ಆಚಾರ್ಯವರಣ, ಮಹಾಸುದರ್ಶನ ಹೋಮ, ಆವಾಹನೆ, ಉಚ್ಛಾಟನೆ, ಪಶುದಾನ ಪುಣ್ಯಾಹ, ಅಂಕುರಾರೋಹಣ, ಪ್ರಾಸಾದ ಶುದ್ಧಿ, ಅಸ್ತ್ರ ಕಲಶ ಪೂಜೆ, ರಕ್ಷೋಘ್ನ ವಾಸ್ತು ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ವಾಸ್ತು ಪುಣ್ಯಾಹ, ರಾತ್ರಿ ಪೂಜೆ ನಡೆಯಲಿದೆ.
ಎ.2 ರಂದು ಸಂಜೆ 6 ರಿಂದ ಅಂಕುರ ಪೂಜೆ, ಹೋಮಕುಂಡ ಶುದ್ಧಿ, ರಾತ್ರಿ ಪೂಜೆ, ಎ.3 ರಂದು ಪೂರ್ವಾಹ್ನ 9 ರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ಎ.4 ರಂದು ಸಂಜೆ 6 ರಿಂದ ಅನುಜ್ಞಾಬಲಿ, ಅನುಜ್ಞಾ ಪ್ರಾರ್ಥನೆ, ಶೈಯಾ ಮಂಟಪ ಶುದ್ಧಿಕಲಶ, ಮಂಟಪ ಶುದ್ಧಿ, ಬಿಂಬ ಶುದ್ಧಿ, ಕಲಶಪೂಜೆ, ಅಧಿವಾಸ ಹೋಮ, ಅಂಕುರ ಪೂಜೆ, ರಾತ್ರಿ ಪೂಜೆ, ಎ.5 ರಂದು ಪೂರ್ವಾಹ್ನ 4 ರಿಂದ ಗಣಪತಿ ಹೋಮ, ತ್ರಿಕಾಲ ಪೂಜೆ, ಉಷಃ ಪೂಜೆ, ಅಂಕುರ ಪೂಜೆ, ಕುಂಭೇಶ ಕರ್ಕರಿ ಕಲಶಪೂಜೆ, ಅಗ್ನಿ ಜನನ, ಸಂಹಾರ ತತ್ವಕಲಶಪೂಜೆ, ಶಯ್ಯಾ ಪೂಜೆ, ನಿದ್ರಾಕಲಶ ಪೂಜೆ, ವಿಧ್ಯೇಶ್ವರ ಕಲಶ ಪೂಜೆ, ಉಪಹಾರ ಸ್ಥಾಪನೆ, ಶಿರಸ್ತತ್ವ ಹೋಮ, ಸಂಹಾರ ತತ್ವಹೋಮ, ಅನುಜ್ಞಾ ಪ್ರಾರ್ಥನೆ, ಸಂಹಾರ ತತ್ವ ಕಲಶಾಭಿಷೇಕ, ಧ್ಯಾನಸಂಕೋಚ ಜೀವ ಕಲಶಪೂಜೆ, ಜೀವೋದ್ವಾಸನ, ಜೀವ ಕಲಶ ಶಯ್ಯಾಗಮನ, ಚಕ್ರಾಬ್ಜ ಪೂಜೆ, ಬ್ರಹ್ಮಕಲಶ ಪೂಜೆ ಮೊದಲಾದವು ನಡೆಯಲಿದೆ.
ಎ.6 ರಂದು ಪೂರ್ವಾಹ್ನ 6.25 ರಿಂದ ಶ್ರೀ ರಾಮನಾಥ, ಅಮ್ಮನವರು, ಕಾಲಭೈರವ, ಮುಖ್ಯಪ್ರಾಣ, ಗರುಡ, ನಾಗದೇವರುಗಳ ಬಿಂಬ ಪ್ರತಿಷ್ಠೆ, ನಂತರ ಅಷ್ಟಬಂಧ ಸ್ಥಾಪನೆ, ಕುಂಭೇಶ ಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಜೀವಕಲಶಾಭಿಷೇಕ, ಜೀವಾವಾಹನ, ಸ್ತೂಲಾವಾಹನ, ಪಾಯಸ ಪೂಜೆ, ಮುಗುಳಿ ಸ್ಥಾಪನೆ, ಪರಿಕಲಶಾಭಿಷೇಕ, ಉಪದೇವರುಗಳ ಕಲಶಾಭಿಷೇಕ, ಬ್ರಹ್ಮಕಲಶ ವಾದ್ಯಘೋಷಗಳೊಂದಿಗೆ ಗರ್ಭಗುಡಿಗೆಕೊಂಡು ಹೋಗುವುದು, ಕುಂಭೇಷ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ ನಡೆಯುವುದು. ರಾತ್ರಿ 8 ರಿಂದ ರಾತ್ರಿ ಪೂಜೆ, ಶ್ರೀ ಭೂತಬಲಿ, ಸೇವಾ ಪ್ರದಕ್ಷಿಣೆ, ಪಂಚವಾದ್ಯ ಸೇವೆ, ನಾದಸ್ವರ ಸೇವೆ, ಭಜನಾ ಸೇವೆ, ವಸಂತ ಮಂಟಪದಲ್ಲಿ ಪೂಜೆ, ಬೆಡಿ, ನೃತ್ಯೋತ್ಸವ ಜರಗಲಿದೆ.