ಉಕ್ರೇನ್: ರಷ್ಯಾ ಯುದ್ಧ ಘೋಷಿಸಿರುವ ಹಿನ್ನೆಲೆಯಲ್ಲಿ ಉಕ್ರೇನ್ ತೊರೆಯುತ್ತಿರುವವರ ನಿರಾಶ್ರಿತರ ಸಂಖ್ಯೆ 1.5 ಮಿಲಿಯನ್ ದಾಟಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಇದು ವಿಶ್ವ ಯುದ್ಧ-2 ರ ನಂತರದಲ್ಲಿ ಯೂರೋಪ್ ನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಿರಾಶ್ರಿತ ಬಿಕ್ಕಟ್ಟಾಗಿದೆ ಎಂದು ವಿಶಸಂಸ್ಥೆ ಹೇಳಿದೆ. 10 ದಿನಗಳಲ್ಲಿ ಉಕ್ರೇನ್ ನಿಂದ 1.5 ಮಿಲಿಯನ್ ನಿರಾಶ್ರಿತರು ನೆರೆ ರಾಷ್ಟ್ರಗಳಿಗೆ ತೆರಳಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.
ಈ ನಡುವೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉಕ್ರೇನ್ ನ ರಾಜ್ಯತ್ವ ಅಪಾಯದಲ್ಲಿದ್ದು, ಪಶ್ಚಿಮ ದೇಶಗಳ ನಿರ್ಬಂಧಗಳನ್ನು ಯುದ್ಧ ಘೋಷಣೆಗೆ ಹೋಲಿಕೆ ಮಾಡಿದ್ದಾರೆ ಹಾಗೂ ಮುತ್ತಿಗೆ ಹಾಕಲಾಗಿರುವ ಮರಿಯುಪೋಲ್ ಬಂದರು ನಗರದಲ್ಲಿ ಕದನ ವಿರಾಮದ ಭರವಸೆ ನೀಡಿದ್ದಾರೆ. ಶನಿವಾರ ರಾತ್ರಿಯಿಂದ ರಷ್ಯಾ ಪಡೆಗಳು ಮರಿಯುಪೋಲ್ ನಗರದ ಮೇಲೆ ಶೆಲ್ಲಿಂಗ್ ನ್ನು ತೀವ್ರಗೊಳಿಸಿವೆ.