ನವದೆಹಲಿ: ಸಿಎಪಿಎಫ್ ( ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ) ಯೋಧರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಕನಿಷ್ಠ 100 ದಿನಗಳ ರಜೆ ನೀಡುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಹಾತ್ವಾಕಾಂಕ್ಷೆಯ ಪ್ರಸ್ತಾವವು ಶೀಘ್ರದಲ್ಲಿ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸಮಗ್ರ ನೀತಿಯ ರೂಪುರೇಷೆಗಳನ್ನು ರೂಪಿಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ.
ನೀತಿಯ ಅನುಷ್ಠಾನಕ್ಕೆ ಇರುವ ಅಡ್ಡಿಗಳ ನಿವಾರಣೆಗೆ ಕೇಂದ್ರ ಗೃಹ ಸಚಿವಾಲಯವು (ಎಂಎಚ್‌ಎ) ಹಲವು ಸಭೆಗಳನ್ನು ನಡೆಸಿದೆ.
ಅತ್ಯಂತ ಸವಾಲೆನಿಸುವ ಪರಿಸರದ ವಾತಾವರಣ ಮತ್ತು ದೂರದ ಸ್ಥಳಗಳಲ್ಲಿ ಕ್ಲಿಷ್ಟಕರ ಕೆಲಸಗಳನ್ನು ನಿರ್ವಹಿಸುವ ಸುಮಾರು 10 ಲಕ್ಷ ಸೈನಿಕರು ಮತ್ತು ಅಧಿಕಾರಿಗಳಿಗೆ ಕೆಲಸದ ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ಉಲ್ಲಸಿತಗೊಳಿಸುವುದು ಪ್ರಮುಖ ಉದ್ದೇಶವಾಗಿದೆ.
'ಕೇಂದ್ರದ ಎಲ್ಲಾ ಸಶಸ್ತ್ರ ಪೊಲೀಸ್ ಪಡೆಗಳಿಗೆ ತಮ್ಮ ಪ್ರಸ್ತಾವಗಳನ್ನು ತ್ವರಿತಗೊಳಿಸುವಂತೆ ಸೂಚಿಸಲಾಗಿದೆ. ಈ ನೀತಿಯನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂದು ಗೃಹ ಸಚಿವಾಲಯವು ಮುಂದಿನ ತಿಂಗಳು ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ' ಎಂದು ಹಿರಿಯ ಸಿಎಪಿಎಫ್ ಅಧಿಕಾರಿಯೊಬ್ಬರು ತಿಳಿಸಿದರು.