ಜ್ಯೂರಿಚ್: ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭಿಸಿದಾಗಿನಿಂದ ಇಲ್ಲಿಯವರೆಗೆ 1,119 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 1,790 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಭಾನುವಾರ ತಿಳಿಸಿದೆ.
ಫೆಬ್ರವರಿ 24 ರಂದು ಯುದ್ಧ ಪ್ರಾರಂಭವಾದಾಗಿನಿಂದ ಮಾರ್ಚ್ 26 ರ ಮಧ್ಯರಾತ್ರಿಯವರೆಗೆ ಯುದ್ಧದ ವೇಳೆ 1,119 ನಾಗರಿಕರ ಸಾವಾಗಿದೆ ಎಂದಿದೆ. 15 ಬಾಲಕರು, 32 ಬಾಲಕಿಯರು ಮತ್ತೆ ಲಿಂಗ ಪತ್ತೆಯಾಗದ 32 ಮಕ್ಕಳು ಇದರಲ್ಲಿ ಸೇರಿದ್ದು ನಿಜವಾದ ಸಾವುನೋವುಗಳ ಅಂಕಿಅಂಶಗಳು ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ.
15 ಬಾಲಕರು, 32 ಬಾಲಕಿಯರು, ಲಿಂಗ ಪತ್ತೆಯಾದ 32 ಮಕ್ಕಳು ಇದರಲ್ಲಿ ಸೇರಿದ್ದು, ನೈಜ ಸಾವು ನೋವುಗಳ ಅಂಕಿಅಂಶಗಳು ಗಣನೀಯವಾಗಿ ಹೆಚ್ಚುವಾಗ ಸಾಧ್ಯತೆಯಿದೆ. ಈ ಸಾವು ನೋವುಗಳ ರಷ್ಯಾ ದಾಳಿ ಮಾಡಿದ ಮರಿಯುಪೋಲ್ ನ ದಕ್ಷಿಣ ಬಂದರು, ಡೊನೆಟ್ಸ್ಕ್ ಪ್ರದೇಶ ವೊಲ್ಕೋವಾಖಾ, ಖಾರ್ಕಿವ್ ಪ್ರದೇಶದ ಇಜಿಯಮ್, ಲುಹಾನ್ಸ್ಕ್ ಪ್ರದೇಶದ ಪೊಪಾಸ್ನಾ ಮತ್ತು ಸುಮ್ನಿ ಪ್ರದೇಶದ ಟ್ರೋಸ್ಟಿಯಾನೆಟ್ ಪ್ರದೇಶದಿಂದ ವರದಿಯಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ನಾಗರಿಕ ಸಾವು ನೋವುಗಳು ಭಾರೀ ಫಿರಂಗಿ ಮತ್ತು ಬಹು ಉಡಾವಣಾ ರಾಕೆಟ್ ವ್ಯವಸ್ಥೆಗಳಿಂದ ಶೆಲ್ ದಾಳಿ, ಕ್ಷಿಪಣಿ ಮತ್ತು ವೈಮಾನಿಕ ದಾಳಿ ಸೇರಿದಂತೆ ಸ್ಫೋಟಕ ಶಸ್ತ್ರಾಸ್ತ್ರಗಳ ದಾಳಿಯಿಂದ ಉಂಟಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.