ಕುಂಬಳೆ: ಸಾಮಾಜಿಕ ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ನೇತೃತ್ವದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಭಾರತ್ ಸ್ವಾತಂತ್ರ್ಯ ಅಮೃತೋತ್ಸವದ ಸವಿನೆನಪು ಕಾರ್ಯಕ್ರಮದ ಅಂಗವಾಗಿ ಕನ್ನಡ ಸಾಹಿತ್ಯ ಸಮ್ಮಿಲನ ಆಯೋಜಿಸಲಾಗಿದೆ.
ಇಂದು(ಮಾ.12 ರಂದು) ಬೆಳಗ್ಗೆ 8.30 ರಿಂದ ನಾರಾಯಣಮಂಗಲ ಎಎಲ್‍ಪಿ ಶಾಲೆಯಲ್ಲಿ ಶ್ರೀ ಪಾರ್ಥಸಾರಥಿ ಮಹಿಳಾ ಭಜನಾ ಸಂಘ ಮುಜುಂಗಾವು, ಶ್ರೀ ಮಹಾವಿಷ್ಣು ಮಹಿಳಾ ಭಜನಾ ಸಂಘ ನಾರಾಯಣಮಂಗಲ ಇವರಿಂದ ದಾಸ ಸಂಕೀರ್ತನೆ ನಡೆಯಲಿದೆ.
10.15ಕ್ಕೆ ಕಾರ್ಯಕ್ರಮವನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ ಉದ್ಘಾಟಿಸುವರು. ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕøತ ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸೂಫ್, ಕುಂಬಳೆ ಗ್ರಾಮ ಪಂಚಾಯತಿ ಸದಸ್ಯೆ ಪಿ.ಸುಲೋಚನ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡು ಘಟಕ ಅಧ್ಯಕ್ಷ ಎಸ್.ವಿ.ಭಟ್, ಕರ್ನಾಟಕ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ ಶುಭಹಾರೈಸುವರು.
11.15 ರಿಂದ ಕಾಸರಗೋಡು ಕನ್ನಡ ಎಂಬ ವಿಷಯದಲ್ಲಿ ಡಾ. ಹರಿಕೃಷ್ಣ ಭರಣ್ಯ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಡಾ. ಧನಂಜಯ ಕುಂಬಳೆ, ಟಿ.ಎ.ಎನ್.ಖಂಡಿಗೆ, ಡಾ.ವರದರಾಜ ಚಂದ್ರಗಿರಿ ವಿವಿಧ ವಿಷಯಗಳಲ್ಲಿ ಮಾತನಾಡುವರು. ಮಧ್ಯಾಹ್ನ 12.30 ರಿಂದ ಕಿಶೋರ್ ಪೆರ್ಲ ಮತ್ತು ಸಂಗಡಿಗರಿಂದ ಭಾವಗೀತೆ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 2 ರಿಂದ ಬಹುಭಾಷಾ ಕವಿಗೋಷ್ಠಿಯಲ್ಲಿ ಡಾ.ಯು.ಮಹೇಶ್ವರಿ ಅಧ್ಯಕ್ಷತೆ ವಹಿಸುವರು. ರಾಧಾಕೃಷ್ಣ ಕೆ.ಉಳಿಯತ್ತಡ್ಕ, ವಿ.ಬಿ.ಕುಳಮರ್ವ, ಶ್ರೀನಿವಾಸ ಆಳ್ವ ಕಳತ್ತೂರು, ರವೀಂದ್ರನ್ ಪಾಡಿ, ಗಣೇಶ್ ಪೈ, ರೂಪವಾಣಿ ಆರ್.ಭಟ್, ಸ್ನೇಹಲತಾ ದಿವಾಕರ್ ಭಾಗವಹಿಸುವರು.
ಅಪರಾಹ್ನ 3.30 ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೆ.ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸುವರು. ಸಿ.ಸೋಮಶೇಖರ್ ಸಮಾರೋಪ ಭಾಷಣ ಮಾಡುವರು. ಹಿರಿಯ ಸಿನಿ ಪತ್ರಕರ್ತ ಬಾಡೂರು ಸುಬ್ರಹ್ಮಣ್ಯ, ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ್ ಪ್ರಭು ಶುಭಹಾರೈಸುವರು. ಸಾಧಕರಿಗೆ ಸಮ್ಮಾನ, ಸಂಜೆ 4.30 ರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.