ತಿರುವನಂತಪುರ: ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಸೇರಿದಂತೆ ಇಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ದರ ಏರಿಕೆ ಕುರಿತು ನಿರ್ಧರಿಸಲು ಎಡರಂಗದ ಸಭೆ ತಿರುವನಂತಪುರದಲ್ಲಿ ನಡೆಯಲಿದೆ. ಕನಿಷ್ಠ ಶುಲ್ಕ 10 ರೂ. ಮತ್ತು ವಿದ್ಯಾರ್ಥಿ ದರ 3 ರೂ. ಆಗಿ ನಿಗದಿಪಡಿಸುವ ಸಾಧ್ಯತೆ ಇದೆ. ಆದರೆ ಬಸ್ ಮಾಲೀಕರು ಕನಿಷ್ಠ ಶುಲ್ಕವನ್ನು ರೂ. 12 ಹೆಚ್ಚಿಸಲು ಬೇಡಿಕೆ ಇರಿಸಿದ್ದು, ಚರ್ಚೆಯ ನಿರ್ಣಯ ಕುತೂಹಲಕರವಾಗಲಿದೆ. ಬಸ್ ಪ್ರಯಾಣ ದರದ ಜತೆಗೆ ಸಿಲ್ವರ್ ಲ್ಯೆನ್ ರಾಜಕೀಯ ವಿವಾದದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಬಿಪಿಎಲ್ ಕುಟುಂಬಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆದಿದೆ. ದರ ಏರಿಕೆಯನ್ನು ಶೀಘ್ರವೇ ಜಾರಿಗೊಳಿಸಲಾಗುವುದು ಎಂದು ಸರಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಸ್ ಮಾಲೀಕರು ಮುಷ್ಕರವನ್ನು ಹಿಂಪಡೆದಿದ್ದಾರೆ. ಸಭೆಯಲ್ಲಿ ಮದ್ಯ ನೀತಿಯ ಬಗ್ಗೆಯೂ ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಚರ್ಚಿಸಬೇಕಾದ ಮುಖ್ಯ ವಿಷಯಗಳಲ್ಲಿ ತಿಂಗಳ ಮೊದಲ ದಿನ ಬಿವರೇಜ್ ಅಂಗಡಿಗಳ ಮುಚ್ಚುವಿಕೆಯ ತಿದ್ದುಪಡಿ ಮತ್ತು ಎರಡು ಬಾರ್‌ಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದೂ ಸೇರಿವೆ.