ತಿರುವನಂತಪುರ: ಭಾರತದ ಕೊರೋನಾ ಹೋರಾಟದಲ್ಲಿ ವ್ಯಾಕ್ಸಿನೇಷನ್ ಅತ್ಯಂತ ನಿರ್ಣಾಯಕ ಅಂಶವಾಗಿದೆ. ಆರೋಗ್ಯ ಕಾರ್ಯಕರ್ತರು, ಸರ್ಕಾರ ಮತ್ತು ಕೊರೋನಾ ಫ್ರಂಟ್ ಲ್ಯೆನ್ ಕಾರ್ಯಕರ್ತರ ಹಗಲಿರುಳು ಪ್ರಯತ್ನದ ಫಲವೇ ಕೊರೋನಾ ತಡೆಗಟ್ಟುವಲ್ಲಿ ಭಾರತದ ಮುಂದುವರಿದ ಸಾಧನೆಗೆ ಮುಖ್ಯ ಕಾರಣ.
ಗ್ರೇಡ್ ಒನ್ ನರ್ಸಿಂಗ್ ಅಧಿಕಾರಿ ಟಿಆರ್ ಪ್ರಿಯಾ ಕೂಡ ಕೊರೋನಾ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಪ್ರಿಯಾ ಇದುವರೆಗೆ 488 ಸೆಷನ್‌ಗಳಲ್ಲಿ 1,33,161 ಡೋಸ್ ಕೊರೋನಾ ಲಸಿಕೆ ನೀಡಿದ್ದಾರೆ.
ಹದಿಮೂರು ತಿಂಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ನೀಡಿದ ಪ್ರಿಯಾ ಅವರನ್ನು ಹುಡುಕಿಕೊಂಡು ಕೇಂದ್ರ ಸರ್ಕಾರದ ಪ್ರಶಸ್ತಿ ಬಂದಿದೆ. ಪ್ರಿಯಾ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಅತ್ಯುತ್ತಮ ಮಹಿಳಾ ಲಸಿಕೆ ನೀಡುವ ಪ್ರಶಸ್ತಿಗೆ ಭಾಜನರಾಗಿದಗದಾರೆ.
ರಾಜ್ಯದಲ್ಲಿ ಕೊರೋನಾ ಲಸಿಕೆ ವಿತರಣೆ ಪ್ರಾರಂಭವಾದ ಜನವರಿ 19, 2021 ರಿಂದ ಪ್ರಿಯಾ ಲಸಿಕೆ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದರು. ಆಸ್ಪತ್ರೆಯ ಕೊರೋನಾ ಚಿಕಿತ್ಸಾ ಕೇಂದ್ರದ ಜೊತೆಗೆ ಶಾಲೆಗಳಲ್ಲಿ ಸ್ಥಾಪಿಸಲಾದ ಕೇಂದ್ರದಲ್ಲಿ ಸೇವೆ ನೀಡಿದ್ದರು. ಈ ನಡುವೆ ದಿನವೊಂದರಲ್ಲೇ ನೂರರಿಂದ ಸಾವಿರ ಚುಚ್ಚುಮದ್ದು ಹಾಕಿದ ದಿನಗಳೂ ಬಂದಿವೆ ಎನ್ನುತ್ತಾರೆ ಪ್ರಿಯಾ.