HEALTH TIPS

ಕೊರೋನಾ; ರಾಜ್ಯದಲ್ಲಿ ಇಂದು 1,408 ಮಂದಿಗೆ ಸೋಂಕು ಪತ್ತೆ: ಗಣನೀಯ ಪ್ರಮಾಣದಲ್ಲಿ ಕ್ಷೀಣಿಸುತ್ತಿರುವ ಸೋಂಕು: ಭರವಸೆಯ ಬೆಳಕಿನತ್ತ ರಾಜ್ಯ

              ತಿರುವನಂತಪುರ: ರಾಜ್ಯದಲ್ಲಿ ಇಂದು 1408 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರ್ನಾಕು|ಳಂ 204, ಕೊಟ್ಟಾಯಂ 188, ತಿರುವನಂತಪುರ 174, ಕೊಲ್ಲಂ 120, ತ್ರಿಶೂರ್ 119, ಪತ್ತನಂತಿಟ್ಟ 99, ಕೋಝಿಕ್ಕೋಡ್ 96, ಇಡುಕ್ಕಿ 85, ಆಲಪ್ಪುಳ 72, ಮಲಪ್ಪುರಂ 69, ವಯನಾಡ್ 61, ಕಣ್ಣೂರು 52, ಪಾಲಕ್ಕಾಡ್ 47, ಕಾಸರಗೋಡು 22 ಎಂಬಂತೆ ಸೋಂಕು ಬಾಧಿಸಿದೆ. ಕಳೆದ 24 ಗಂಟೆಗಳಲ್ಲಿ 25,325 ಮಾದರಿಗಳನ್ನು ಪರೀಕ್ಷಿಸಲಾಗಿದೆ.

               ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 75,365 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 74,070 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 1295 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 189 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, 14,153 ಕೊರೋನಾ ಪ್ರಕರಣಗಳಲ್ಲಿ, ಕೇವಲ 9.3 ಶೇಕಡಾ ಜನರು ಮಾತ್ರ ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

                     ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ ಇಬ್ಬರು ಮೃತರಾಗಿದ್ದಾರೆ. ಅಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ 27 ಸಾವುಗಳು ಮತ್ತು ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 15 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 66,180ಕ್ಕೆ ಏರಿಕೆಯಾಗಿದೆ.

                  ಇಂದು ಸೋಂಕು ದೃಢಪಟ್ಟ ಎರಡು ಪ್ರಕರಣಗಳು ಹೊರ ರಾಜ್ಯದಿಂದ ಬಂದವರು. ಸಂಪರ್ಕದಿಂದ 1336 ಮಂದಿ ಜನರು ಸೋಂಕಿಗೆ ಒಳಗಾಗಿದ್ದಾರೆ. 62 ಮಂದಿ ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ಎಂಟು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಟ್ಟಿದೆ.  

           ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 3033 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 357, ಕೊಲ್ಲಂ 715, ಪತ್ತನಂತಿಟ್ಟ 194, ಆಲಪ್ಪುಳ 163, ಕೊಟ್ಟಾಯಂ 186, ಇಡುಕ್ಕಿ 164, ಎರ್ನಾಕುಳಂ 406, ತ್ರಿಶೂರ್ 212, ಪಾಲಕ್ಕಾಡ್ 32, ಮಲಪ್ಪುರಂ 111, ಕೋಝಿಕ್ಕೋಡ್ 201, ವಯನಾಡ್ 107, ಕಣ್ಣೂರು 118, ಕಾಸರಗೋಡು 67 ಮಂದಿಗಳು ಎಂಬಂತೆ ಕೋವಿಡ್ ನಿಂದ ಮುಕ್ತರಾಗಿದ್ದಾರೆ. 

                ಇದರೊಂದಿಗೆ 14,153 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 64,30,941 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries