ತಿರುವನಂತಪುರ: ರಾಜ್ಯದಲ್ಲಿ ಇಂದು 1421 ಮಂದಿಗೆ ಕೊರೊನಾ ದೃಢಪಟ್ಟಿವೆ: ಎರ್ನಾಕುಳಂ 304, ಕೊಟ್ಟಾಯಂ 161, ತಿರುವನಂತಪುರ 149, ಕೊಲ್ಲಂ 128, ತ್ರಿಶೂರ್ 112, ಇಡುಕ್ಕಿ 104, ಕೋಝಿಕ್ಕೋಡ್ 103, ಪತ್ತನಂತಿಟ್ಟ 82, ಮಲಪ್ಪುರಂ 63, ವಯನಾಡು 61, ಪಾಲಕ್ಕಾಡು 48, ಆಲಪ್ಪಾಪುಳ 47, ಕಣ್ಲಣೂರು 47, ಕಾಸರಗೋಡು 12 ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 29,754 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 43,384 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 42,289 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 1,095 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 138 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಸ್ತುತ 11,879 ಕೊರೋನಾ ಪ್ರಕರಣಗಳಲ್ಲಿ, ಕೇವಲ 9 ಶೇ.ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ ನಾಲ್ವರು ಮೃತರಾಗಿದ್ದಾರೆ. ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳ ವಿಳಂಬದಿಂದ 13 ಸಾವುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 71 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 66,462ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ 64 ಮಂದಿ ಹೊರ ರಾಜ್ಯದವರು. ಸಂಪರ್ಕದಿಂದ 1276 ಮಂದಿ ಜನರು ಸೋಂಕಿಗೆ ಒಳಗಾಗಿದ್ದಾರೆ. 67 ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ಹದಿನಾಲ್ಕು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢೀಕರಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2130 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 246, ಕೊಲ್ಲಂ 157, ಪತ್ತನಂತಿಟ್ಟ 101, ಆಲಪ್ಪುಳ 126, ಕೊಟ್ಟಾಯಂ 196, ಇಡುಕ್ಕಿ 187, ಎರ್ನಾಕುಳಂ 390, ತ್ರಿಶೂರ್ 183, ಪಾಲಕ್ಕಾಡ್ 30, ಮಲಪ್ಪುರಂ 104, ಕೋಝಿಕ್ಕೋಡ್ 170, ವಯನಾಡ್ 115, ಕಣ್ಣೂರು 88, ಕಾಸರಗೋಡು 37 ಎಂಬಂತೆ ಗುಣಮುಖರಾಗಿದ್ದಾರೆ.