HEALTH TIPS

ಕೊರೋನಾ; ರಾಜ್ಯದಲ್ಲಿ ಇಂದು 1426 ಮಂದಿಗೆ ಕೊರೊನಾ ಪತ್ತೆ: 27,923 ಮಾದರಿಗಳ ಪರೀಕ್ಷೆ: ಕಾಸರಗೋಡಲ್ಲಿ ಗಣನೀಯ ಇಳಿಕೆಯಾದ ಸೋಂಕು


        ತಿರುವನಂತಪುರ: ರಾಜ್ಯದಲ್ಲಿ ಇಂದು  1426 ಮಂದಿಗೆ ಕೋವಿಡ್ ದೃಢಪಟ್ಟಿದೆ. ಎರ್ನಾಕುಳಂ 260, ಕೊಟ್ಟಾಯಂ 187, ತಿರುವನಂತಪುರ 179, ಕೊಲ್ಲಂ 128, ಪತ್ತನಂತಿಟ್ಟ 115, ಇಡುಕ್ಕಿ 96, ಕೋಝಿಕ್ಕೋಡ್ 93, ತ್ರಿಶೂರ್ 88, ಅಲಪ್ಪುಳ 65, ಪಾಲಕ್ಕಾಡ್ 51, ವಯನಾಡ್ 50, ಮಲಪ್ಪುರ 45, ಕಾಸರಗೋಡು 12 ಎಂಬಂತೆ ಸೋಂಕು ಪತ್ತೆಯಾಗಿದೆ.  ಕಳೆದ 24 ಗಂಟೆಗಳಲ್ಲಿ 27,923 ಮಾದರಿಗಳನ್ನು ಪರೀಕ್ಷಿಸಲಾಗಿದೆ.
         ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 31,380 ಮಂದಿ ಜನರು ನಿಗಾದಲ್ಲಿದ್ದಾರೆ.  ಇವರಲ್ಲಿ 30,331 ಮಂದಿ ಮನೆ/ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 1,049 ಮಂದಿ ಆಸ್ಪತ್ರೆಗಳಲ್ಲಿದ್ದಾರೆ.  120 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಪ್ರಸ್ತುತ, 11,022 ಕೋವಿಡ್ ಪ್ರಕರಣಗಳಲ್ಲಿ, ಕೇವಲ 9.5 ಶೇಕಡಾ ಜನರು ಮಾತ್ರ ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
      ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ ಇಬ್ಬರು ಮೃತರಾಗಿದ್ದಾರೆ. ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳ ವಿಳಂಬದಿಂದ 22 ಸಾವುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 203 ಸಾವುಗಳು ವರದಿಯಾಗಿವೆ.  ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 66,689ಕ್ಕೆ ಏರಿಕೆಯಾಗಿದೆ.
        ಇಂದು ಸೋಂಕು ಪತ್ತೆಯಾದವರಲ್ಲಿ ಆರು ಮಂದಿ ಹೊರ ರಾಜ್ಯದವರು.  1342 ಮಂದಿ  ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ.  64 ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು  ಹದಿನಾಲ್ಕು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಪತ್ತೆಯಾಗಿದೆ. 
     ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2055 ಮಂದಿ ಜನರು ಗುಣಮುಖರಾಗಿದ್ದಾರೆ.  ತಿರುವನಂತಪುರ 205, ಕೊಲ್ಲಂ 171, ಪತ್ತನಂತಿಟ್ಟ 170, ಆಲಪ್ಪುಳ 98, ಕೊಟ್ಟಾಯಂ 234, ಇಡುಕ್ಕಿ 152, ಎರ್ನಾಕುಲಂ 387, ತ್ರಿಶೂರ್ 153, ಪಾಲಕ್ಕಾಡ್ 30, ಮಲಪ್ಪುರಂ 87, ಕೋಝಿಕ್ಕೋಡ್ 174, ವಯನಾಡ್ 101, ಕಣ್ಣೂರು 83, ಕಾಸರಗೋಡು 10 ಎಂಬಂತೆ ಗುಣಮುಖರಾಗಿದ್ದಾರೆ.
       ಇದರೊಂದಿಗೆ 11,022 ಮಂದಿಗೆ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದುವರೆಗೆ 64,39,421 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries