ತಿರುವನಂತಪುರ: ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಅಪವರ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಅಕ್ರಮ ಹಣ ವರ್ಗಾವಣೆಯಲ್ಲಿ ವಂಚಕನನ್ನು ಬಂಧಿಸಲಾಗಿದೆ. ದೆಹಲಿಯಲ್ಲಿ ನಡೆದ ಘಟನೆಯಲ್ಲಿ ನೈಜೀರಿಯಾ ಪ್ರಜೆ ರೊಮಾನಸ್ ಕ್ಲಿಬ್ಸ್ ಎಂಬಾತನನ್ನು ಬಂಧಿಸಲಾಗಿದೆ. ತಿರುವನಂತಪುರ ಸಿಟಿ ಸೈಬರ್ ಪೊಲೀಸರು ಆತನನ್ನು ದೆಹಲಿಯಿಂದ ಬಂಧಿಸಿದ್ದಾರೆ. ಈತ ಅನಿಲ್ ಕಾಂತ್ ಹೆಸರಿನಲ್ಲಿ ಶಿಕ್ಷಕಿಯೊಬ್ಬರಿಂದ 14 ಲಕ್ಷ ರೂ.ಲಪಟಪಾಯಿಸಿದ್ದ.
ಅನಿಲ್ ಕಾಂತ್ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆ ಮಾಡಿ ಕೊಲ್ಲಂನಲ್ಲಿ ಶಿಕ್ಷಕರೊಬ್ಬರಿಂದ ಹಣ ವಸೂಲಿ ಮಾಡಿದ್ದ. ಕೊಲ್ಲಂನ ಕುಂದರದ ಶಿಕ್ಷಕಿಯೊಬ್ಬರಿಗೆ ಆನ್‌ಲೈನ್ ಲಾಟರಿ ಗೆದ್ದಿರುವುದಾಗಿ ನಂಬಿಸಲಾಗಿತ್ತು. ಬಹುಮಾನದ ಹಣವನ್ನು ಪಾವತಿಸುವ ಮೊದಲು ತೆರಿಗೆಯನ್ನು ಪಾವತಿಸುವಂತೆ ತಂಡವು ಸಂದೇಶವನ್ನು ಕಳುಹಿಸಿತ್ತು. ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಅವರ ಹೆಸರಿನಲ್ಲಿ ವಾಟ್ಸಾಪ್ ನಿಂದ ಸಂದೇಶ ರವಾನೆಯಾಗಿದೆ. ನಂತರ ಅವರು ಪಾವತಿಸಿದರು.