ನವದೆಹಲಿ: ಕಳೆದ 15 ವರ್ಷಗಳಲ್ಲಿ ಚೀನಾದ 16 ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಬುಧವಾರ ಹೇಳಿದ್ದಾರೆ.
ನವದೆಹಲಿ: ಕಳೆದ 15 ವರ್ಷಗಳಲ್ಲಿ ಚೀನಾದ 16 ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಬುಧವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಭಾರತದ ಪೌರತ್ವ ಆಶಿಸಿ ಇನ್ನೂ 10 ಚೀನೀಯರ ಅರ್ಜಿಗಳು ಬಾಕಿ ಉಳಿದಿವೆ.
ಭಾರತದಲ್ಲಿ ಆಶ್ರಯ ಬಯಸಿದವರು ಸೇರಿ ಎಲ್ಲಾ ವಿದೇಶಿ ಪ್ರಜೆಗಳಿಗೆ ವಿದೇಶಿಯರ ಕಾಯ್ದೆ 1946, ವಿದೇಶಿಯರ ನೋಂದಣಿ ಕಾಯ್ದೆ 1939, ಪಾಸ್‌ಪೋರ್ಟ್ (ಭಾರತದ ಪ್ರವೇಶಕ್ಕೆ) ಕಾಯ್ದೆ 1920 ಮತ್ತು ಪೌರತ್ವ ಕಾಯ್ದೆ 1955ರ ನಿಬಂಧನೆಗಳಡಿ ಭಾರತದ ಪೌರತ್ವ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.