ಬೆಂಗಳೂರು: ಯುವಜನಾಂಗವನ್ನು ಸೆಳೆಯುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎರಡು ವಾರಗಳ ವಿಶೇಷ ಕಾರ್ಯಕ್ರಮಕ್ಕಾಗಿ ದೇಶಾದ್ಯಂತ 9ನೇ ತರಗತಿಯಿಂದ 150 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಿದೆ.
ಬೆಂಗಳೂರು, ತಿರುವನಂತಪುರಂ, ಹೈದರಾಬಾದ್, ಅಹಮದಾಬಾದ್ ಮತ್ತು ಶಿಲ್ಲಾಂಗ್ ನಲ್ಲಿ ಇಸ್ರೋ ಯುವಿಕಾ (ಯುವ ವಿಜ್ಞಾನಿ ಕಾರ್ಯಕ್ರಮ) ಆಯೋಜಿಸಲಿದೆ. ಅಲ್ಲದೇ ಅವರನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಪ್ರವಾಸಕ್ಕೆ ಕರೆದೊಯ್ಯಲಾಗುತ್ತದೆ.
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪ್ರಸ್ತುತ ಮತ್ತು ಹೊರಹೊಮ್ಮುತ್ತಿರುವ ಪ್ರವೃತ್ತಿಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳ ನಡುವೆ ವಿವಿಧ ಚರ್ಚೆಗಳು ಮತ್ತು ಸಂವಾದವನ್ನು ಈ ಕಾರ್ಯಕ್ರಮ ಹೊಂದಿರುತ್ತದೆ. ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿಗಳನ್ನು ಈಗಾಗಲೇ ಆಹ್ವಾನಿಸಲಾಗಿದ್ದು, ಏಪ್ರಿಲ್ 10 ಸಂಜೆ ಗಂಟೆ ಅರ್ಜಿ ಸಲ್ಲಿಕೆಗೆ ಕಡೇಯ ದಿನವಾಗಿದೆ.
ಮೇ 16 ರಿಂದ ಮೇ 28ರವರೆಗೂ ಕಾರ್ಯಕ್ರಮ ನಡೆಯಲಿದೆ. 8ನೇ ತರಗತಿಯಲ್ಲಿ ಪಡೆದಿರುವ ಅಂಕಗಳು, ವಿಜ್ಞಾನ ಮೇಳ, ಒಲಿಂಪಿಯಡ್ ನಲ್ಲಿ ಬಹುಮಾನ, ವಿಜ್ಞಾನ ಸ್ಪರ್ಧೆ , ಎನ್ ಸಿಸಿ, ಅಥವಾ ಎನ್ ಎಸ್ ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
ಆನ್ ಲೈನ್ ನೋಂದಣಿಗಾಗಿ https://yuvika.isro.gov.in/yuvika/register.jsp.ಸಂಪರ್ಕಿಸಬಹುದು.