ಕಾಸರಗೋಡು: ಅಭಿವೃದ್ಧಿ ನಕ್ಷೆಯಲ್ಲಿ ಕಾಸರಗೋಡನ್ನು ಗುರುತಿಸಲು ಜಾಗತಿಕ ಹೂಡಿಕೆ ವೇದಿಕೆಯೊಂದಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ ಯೋಜನೆ ರೂಪಿಸಿದೆ. ಜಿಲ್ಲಾ ಕೈಗಾರಿಕಾ ಕೇಂದ್ರವು ಕೆಎಲ್-14 ಗ್ಲೋಬಲ್ ಮೀಟ್ ಅನ್ನು ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ಆಯೋಜಿಸುತ್ತದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಹೂಡಿಕೆ ಮೇಳ ನಡೆಯಲಿದೆ.
ಜಾಗತಿಕ ಹೂಡಿಕೆದಾರರ ವೇದಿಕೆಯ ಪೂರ್ವಭಾವಿಯಾಗಿ ಮಾ.16 ಮತ್ತು 17ರಂದು ಕಾಸರಗೋಡು ಜೀವಸ್ ಮಾನಸಂ ಸಭಾಂಗಣದಲ್ಲಿ ಚಾಲನಾ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ತಿಳಿಸಿದರು. ಕಾರ್ಯಕ್ರಮ ಜಾಗತಿಕ ಹೂಡಿಕೆದಾರರ ವೇದಿಕೆಯಲ್ಲಿ ಜಿಲ್ಲೆಯನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದರ ಕುರಿತು ಚರ್ಚೆಗಳು ಒಳಗೊಂಡಿರುತ್ತದೆ. ವಿವಿಧ ಜಿಲ್ಲಾ ಪಂಚಾಯಿತಿ ಆಡಳಿತ ಸಮಿತಿ ಸದಸ್ಯರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ನಾನಾ ಕ್ಷೇತ್ರಗಳ ತಜ್ಞರು ವಿಷಯ ಮಂಡನೆ ಮಾಡಲಿದ್ದಾರೆ. ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು, ಕೈಗಾರಿಕೆ, ಕೃಷಿ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಗಣ್ಯರು, ಮಾಧ್ಯಮದವರು ಹಾಗೂ ವಿವಿಧ ಸಂಘ ಸಂಸ್ಥೆಗಳು ಚರ್ಚೆಯಲ್ಲಿ ಭಾಗವಹಿಸುವರು. ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಉದ್ಘಾಟಿಸಲಿದ್ದಾರೆ. ಹಿಂದಿನ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಚರ್ಚೆಯ ನೇತೃತ್ವ ವಹಿಸಲಿದ್ದಾರೆ. ಭಾಗವಹಿಸಲು ಆಸಕ್ತಿಯುಳ್ಳ ಸಾರ್ವಜನಿಕರು ನೋಂದಾಯಿಸಿಕೊಳ್ಳಬಹುದು. 9847747025, 7025835663.