ತಿರುವನಂತಪುರಂ: ರಾಜ್ಯದಲ್ಲಿ ಇಂದು 809 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರ್ನಾಕುಳಂ 141, ತಿರುವನಂತಪುರ 111, ಕೊಲ್ಲಂ 84, ಕೊಟ್ಟಾಯಂ 83, ಇಡುಕ್ಕಿ 69, ಕೋಝಿಕ್ಕೋಡ್ 56, ತ್ರಿಶೂರ್ 55, ಪತ್ತನಂತಿಟ್ಟ 43, ಕಣ್ಣೂರು 37, ಪಾಲಕ್ಕಾಡ್ 33, ಅಲಪ್ಪುಳ 32, ಮಲಪ್ಪುರಂ 29, ವಯನಾಡ್ 28, ಕಾಸರಗೋಡು 8 ಮಂದಿ ಎಂಬಂತೆ ಕೋವಿಡ್ ಪತ್ತೆಯಾಗಿದೆ. ಕಳೆದ 24 ಗಂಟೆಗಳಲ್ಲಿ 18,467 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 24,808 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಇವರಲ್ಲಿ 23,960 ಮಂದಿ ಮನೆ/ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 848 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 101 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, 7980 ಕೊರೋನಾ ಪ್ರಕರಣಗಳಲ್ಲಿ, ಕೇವಲ 10.4 ಶೇಕಡಾ ಜನರು ಮಾತ್ರ ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ ಯಾರೂ ಮೃತರಾಗಿಲ್ಲ. ಏತನ್ಮಧ್ಯೆ, ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ ಹಿಂದಿನ ದಿನಗಳಲ್ಲಿ ಏಳು ಸಾವುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 71 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 66,886ಕ್ಕೆ ಏರಿಕೆಯಾಗಿದೆ.
ಇಂದು ದೃಢಪಟ್ಟ ಯಾವುದೇ ಪ್ರಕರಣಗಳಲ್ಲಿ ಹೊರ ರಾಜ್ಯದವರು ಯಾರೂ ಇಲ್ಲ. 769 ಮಂದಿ ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 32 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ಎಂಟು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಕಂಡುಬಂದಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 1597 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 257, ಕೊಲ್ಲಂ 95, ಪತ್ತನಂತಿಟ್ಟ 68, ಆಲಪ್ಪುಳ 42, ಕೊಟ್ಟಾಯಂ 209, ಇಡುಕ್ಕಿ 207, ಎರ್ನಾಕುಲಂ 313, ತ್ರಿಶೂರ್ 141, ಪಾಲಕ್ಕಾಡ್ 34, ಮಲಪ್ಪುರಂ 44, ಕೋಝಿಕ್ಕೋಡ್ 17, ವಯನಾಡ್ 63, ಕಣ್ಣೂರು 82, ಕಾಸರಗೋಡು 25 ಮಂದಿ ಎಂಬಂತೆ ಗುಣಮುಖರಾಗಿದ್ದಾರೆ.