ನವದೆಹಲಿ: 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗೊಳ್ಳಲಾದ ಜಲಮೂಲಗಳ ಗಣತಿಯಲ್ಲಿ ಒಟ್ಟು 9.45 ಲಕ್ಷ ಜಲಮೂಲಗಳನ್ನು ಗುರುತಿಸಲಾಗಿದ್ದು, 18,691 ಕೆರೆಕಟ್ಟೆಗಳು ಒತ್ತುವರಿಯಾಗಿವೆ ಎಂದು ಜಲಶಕ್ತಿ ಸಚಿವಾಲಯ ಹೇಳಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಲಶಕ್ತಿ ಖಾತೆ ರಾಜ್ಯ ಸಚಿವ ಬಿಶ್ವೇಶ್ವರ್ ತುಡು, ಜಲ ಮೂಲಗಳನ್ನು ಗುರುತಿಸಿರುವ ತತ್ಕಾಲಿಕ ಅಂಕಿ ಅಂಶಗಳನ್ನು ತಿಳಿಸಿದರು.
ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ ಮೂಲಕ ಜಲಮೂಲಗಳನ್ನು ಮರುಪೂರಣ ಮಾಡುವ ಕೆಲಸಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.