ಕಾಸರಗೋಡು: ವೈಜ್ಞಾನಿಕ ಸಂಶೋಧನೆಗಾಗಿ ಕಾಸರಗೋಡು ಸರಕಾರಿ ಕಾಲೇಜಿಗೆ 1.8 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವೆ ಆರ್.ಬಿಂದು ತಿಳಿಸಿದ್ದಾರೆ.
ಕಣ್ಣೂರು ವಿಶ್ವವಿದ್ಯಾನಿಲಯ ಯೂನಿಯನ್ ನ 22ನೇ ಕಲೋತ್ಸವದ ವೇದಿಕೆ ಸ್ಪರ್ಧೆಗಳನ್ನು ಮೊನ್ನೆ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಹಬ್ಬಗಳು ಪ್ರೀತಿ, ಅನ್ಯೋನ್ಯತೆಯ ಸಂಗಮ ಸ್ಥಳವಾಗಬೇಕು ಎಂದು ಸಚಿವರು ಹೇಳಿದರು. ದೇಶದ ವೈವಿಧ್ಯತೆಯೇ ನಮ್ಮ ಸಂಪತ್ತು ಮತ್ತು ಅದು ನಮ್ಮ ಶಕ್ತಿ ಎಂದು ಸಚಿವರು ನೆನಪಿಸಿದರು. ಸಚಿವರು ತಮ್ಮ ಕಾಲೇಜು ದಿನಗಳ ವರ್ಣರಂಜಿತ ನೆನಪುಗಳನ್ನು ಮತ್ತು ಅಲ್ಲಿಂದ ಗಟ್ಟಿಯಾದ ಸ್ನೇಹವನ್ನು ಮೆಲುಕು ಹಾಕಿದರು. ಕಲಾಮೇಳಗಳು ಮಿಲನದ ಚಿತ್ರಗಳಾಗಬೇಕು ಮತ್ತು ಆತ್ಮವಿಶ್ವಾಸದ ಪೀಳಿಗೆಗಳು ಕಾಲೇಜುಗಳ ಮೂಲಕ ಸಮಾಜವನ್ನು ಪ್ರವೇಶಿಸಬೇಕು ಎಂದು ಸಚಿವರು ಹೇಳಿದರು.
ಕೇರಳದ ಸಂಸ್ಕøತಿಯು ಕಲೆಯ ಸೃಜನಶೀಲ ಸಾಮಥ್ರ್ಯವನ್ನು ಮಾನವನ ಉಳಿವಿಗಾಗಿ ಯಾವಾಗಲೂ ಮುನ್ನಡೆಸಿದೆ ಎಂದು ಸಚಿವರು ಹೇಳಿದರು. ಕಾಸರಗೋಡು ಪಿ.ಕುಂಞÂ್ಞ ರಾಮನ್ ನಾಯರ್, ಟಿ. ಉಬೈದ್, ವಿದ್ವಾಂಸ ಪಿ. ಕೇಳುನಾಯರಂತಹ ಪ್ರತಿಭೆಗಳನ್ನು ಸಚಿವರು ಸ್ಮರಿಸಿದರು. ಕಾಸರಗೋಡು ವಿವಿಧ ಸಂಸ್ಕೃತಿಗಳ ಮಿಶ್ರಣವಾಗಿರುವ ಭಾರತದ ಪುಟ್ಟ ಆವೃತ್ತಿಯಾಗಿದೆ ಎಂದರು.
ಸಮಾರಂಭದಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ವಿಶ್ವವಿದ್ಯಾಲಯ ಪ್ರೊ. ವೈಸ್ ಚಾನ್ಸೆಲರ್ ಡಾ. ಸಾಬು ಅಬ್ದುಲ್ ಹಮೀದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯ ಯೂನಿಯನ್ ಚೇರ್ಮನ್ ಅಡ್ವ ಎಂ.ಕೆ.ಹಸನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಡಾ.ಅರುಣಕುಮಾರ್, ಚಿತ್ರನಟಿ ಮರೀನಾ ಮೈಕಲ್ ಭಾಗವಹಿಸಿದ್ದರು. ಶಾಸಕರಾದ ನ್ಯಾಯವಾದಿ ಸಿ.ಎಚ್.ಕುಂಞಂಬು, ಎ.ಕೆ.ಎಂ.ಅಶ್ರಫ್À, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್, ಸಿಂಡಿಕೇಟ್ ಸದಸ್ಯರಾದ ಡಾ.ಎ.ಅಶೋಕನ್, ಎಂ.ಸಿ.ರಾಜು, ಡಾ.ರಾಖಿ ರಾಘವನ್, ಡಾ.ಕೆ.ಟಿ.ಚಂದ್ರಮೋಹನನ್, ಡಾ.ಟಿ.ಪಿ.ಅಶ್ರಫ್, ಕೆ.ವಿ.ಪ್ರಮೋದ್ ಕುಮಾರ್, ಕಣ್ಣೂರು ವಿವಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕಿ ಟಿ.ಪಿ.ನಫೀಸಾ ಬೇಬಿ, ಕಣ್ಣೂರು ವಿವಿ ಯೂನಿಯನ್ ಪ್ರಧಾನ ಕಾರ್ಯದರ್ಶಿ ಕೆ.ವಿ.ಶಿಲ್ಪಾ, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಕೆ.ಹರಿಕುರುಪ್, ಸೆನೆಟ್ ಸದಸ್ಯರಾದ ಡಾ. ಕೆ ವಿಜಯನ್, ಡಾ.ಕೆ.ಎಸ್.ಸುರೇಶ್ ಕುಮಾರ್, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಆಸಿಫ್ ಇಕ್ಬಾಲ್ ಕಕ್ಕಸ್ಸೆರಿ, ಪಿಟಿಎ ಉಪಾಧ್ಯಕ್ಷ ಅರ್ಜುನನ್ ತಾಯಿಲಂಗಾಡಿ, ಕಣ್ಣೂರು ವಿಶ್ವವಿದ್ಯಾನಿಲಯ ಒಕ್ಕೂಟದ ಜಂಟಿ ಕಾರ್ಯದರ್ಶಿ ವಿ ಸಚಿನ್, ಕಣ್ಣೂರು ವಿಶ್ವವಿದ್ಯಾನಿಲಯ ಒಕ್ಕೂಟದ ಉಪಾಧ್ಯಕ್ಷ ಪಿ ಜಿಷ್ಣು, ಕಣ್ಣೂರು ವಿಶ್ವವಿದ್ಯಾನಿಲಯ ಯೂನಿಯನ್ ಎಕ್ಸಿಕ್ಯೂಟಿವ್ - ಕಣ್ಣೂರು ಜಿಲ್ಲೆ ಕೆ. ಅಪರ್ಣಾ, ಕಾಸರಗೋಡು ಸರಕಾರಿ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಆಯಿಷತ್ ಮಹ್ಸುಮಾ ಮತ್ತಿತರರು ಮಾತನಾಡಿದರು.
ಸಂಘಟನಾ ಸಮಿತಿ ಸಂಚಾಲಕ ಅಲ್ಬಿನ್ ಮ್ಯಾಥ್ಯೂ ಸ್ವಾಗತಿಸಿ, ಕಣ್ಣೂರು ವಿಶ್ವವಿದ್ಯಾನಿಲಯ ಒಕ್ಕೂಟದ ಜಿಲ್ಲಾ ಕಾರ್ಯಕಾರಿಣಿ ಬಿ.ಕೆ.ಶೈಜಿನಾ ವಂದಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಸ್ಮರಣಿಕೆಯನ್ನು ಸಚಿವೆ ಆರ್.ಕೆ. ಬಿಂದು ಬಿಡುಗಡೆ ಮಾಡಿದರು. ಸಂಘಟನಾ ಸಮಿತಿ ಸಂಚಾಲಕ ಅಲ್ಬಿನ್ ಮ್ಯಾಥ್ಯೂ ಸಚಿವರಿಗೆ ಉಡುಗೊರೆ ನೀಡಿದರು.
120 ಸ್ಪರ್ಧೆಗಳಲ್ಲಿ ಕಣ್ಣೂರು, ಕಾಸರಗೋಡು ಮತ್ತು ವಯನಾಡು ಜಿಲ್ಲೆಗಳ 140 ಕಾಲೇಜುಗಳಿಂದ 5000 ವಿದ್ಯಾರ್ಥಿಗಳು ಕಲಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಕಾಸರಗೋಡು ಸರಕಾರಿ ಕಾಲೇಜು, ಬಹುಭಾಷಾ ಸಂಗಮ ಭೂಮಿಯಲ್ಲಿ ಪ್ರಪ್ರಥಮ ಬಾರಿಗೆ ಕಣ್ಣೂರು ವಿಶ್ವವಿದ್ಯಾನಿಲಯ ಯೂನಿಯನ್ ಕಲಾ ಉತ್ಸವವನ್ನು ಆಯೋಜಿಸುತ್ತಿದೆ.