ಉಪ್ಪಳ: ಅಡ್ಕ ಶ್ರೀ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಮಾ. 19ರಿಂದ 24ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
19ರಂದು ಬೆಳಿಗ್ಗೆ 8.30ಕ್ಕೆ ಗಣಹೋಮ ಮತ್ತು ಚಪ್ಪರ ಮುಹೂರ್ತ, ಮಧ್ಯಹ್ನ 1ರಿಂದ 2.30ರತನಕ ಅನ್ನಸಂತರ್ಪಣೆ, ಸಂಜೆ 7ಕ್ಕೆ ಭಂಡಾರ ಆರೋಹಣ ಮತ್ತು ನಡೋದಿ ಉತ್ಸವ, ರಾತ್ರಿ 9ರಿಂದ 10.30ರ ತನಕ ಅನ್ನದಾನ, 20ರಂದು ಬೆಳಿಗ್ಗೆ 11.30ಕ್ಕೆ ನಾಗ ತಂಬಿಲ, ಮಧ್ಯಾಹ್ನ 1ರಿಂದ 2.30ರ ತನಕ ಅನ್ನದಾನ, ಸಂಜೆ 4ರಿಂದ 7ರತನಕ ಪುಲ್ಲೂರ್ ಕಣ್ಣನ್, ಕಾಳಪುಲಿಯನ್, ಪುಲಿಕಂಡನ್, ವೇಟಕ್ಕುರು ಮಗನ್ ದೈವಗಳ ವೆಳ್ಳಾಟಂ, ರಾತ್ರಿ 8ಕ್ಕೆ ಮೊದಲ ಕಳಿಯಾಟ ಆರಂಭ, ಕರಿಂದಿರ ನಾಯರ್ ವೆಳ್ಳಾಟಂ, ಕೆಂಡ ಸೇವೆ, ಬಲಿ, ಬಿಂಬ ದರ್ಶನ, ಪುಲ್ಲೂರಾಳಿ ದೈವದ ತೋಟ್ಟಂ, ರಾತ್ರಿ 8.30ರಿಂದ 10ರ ತನಕ ಅನ್ನದಾನ, 10ಕ್ಕೆ ಪುಲಿಚೋಗನ್ ದೈವ, 11ಕ್ಕೆ ಕರಿಂದಿರ ನಾಯರ್ ದೈವ, 21ರಂದು ಬೆಳಿಗ್ಗೆ 6ಕ್ಕೆ ಕಾಳಪುಲಿಯನ್ ದೈವ, 8ಕ್ಕೆ ವೇಟಕ್ಕುರು ಮಗನ್ ದೈವ, 10ಕ್ಕೆ ಪುಲಿಕಂಡನ್ ದೈವ, 11ಕ್ಕೆ ಪುಲ್ಲೂರಾಳಿ ದೈವ, ಮಧ್ಯಾಹ್ನ 1ರಿಂದ 2.30ರ ತನಕ ಅನ್ನದಾನ, ಸಂಜೆ 4ರಿಂದ 7ರ ತನಕ ಪುಲ್ಲೂರ್ ಕಣ್ಣನ್, ಕರಿಂದಿರ ನಾಯರ್, ವೇಟಕ್ಕುರು ಮಗನ, ಕಾಳಪುಲಿಯನ್ ದೈವಗಳ ವೆಳ್ಳಾಟಂ, ರಾತ್ರಿ 7ಕ್ಕೆ ನಡು ಕಳಿಯಾಟ ಆರಂಭ, ರಾತ್ರಿ 8.30ರಿಂದ 10ರ ತನಕ ಅನ್ನದಾನ, 9.30ಕ್ಕೆ ಹೂವಿನ ಪೂಜೆ, 10ಕ್ಕೆ ಪ್ರಧಾನ ಉತ್ಸವ, ಪುಲಿಕಂಡನ್ ದೈವದ ವೆಳ್ಳಾಟಂ, ಕೆಂಡಸೇವೆ, ಬಲಿ, ಬಿಂಬ ದರ್ಶನ, ಪುಲ್ಲಿಕರಿಂಗಾಳಿ ಮತ್ತು ಪುಲ್ಲುರಾಳಿ ದೈವದ ತೋಟ್ಟಂ, ರಾತ್ರಿ 2ಕ್ಕೆ ಪುಲಿಕಂಡನ್ ದೈವದ ದರ್ಶನ ಪಾತ್ರಿ ದೈವ ದರ್ಶನದೊಂದಿಗೆ ಐಲ ಶ್ರೀ ದುರ್ಗಾಪರಮೇಶ್ವರೀ ದೇವಿಯ ಭೇಟಿಗೆ ಹೊರಡುವುದು, ರಾತ್ರಿ 8ರಿಂದ 9.15ರ ತನಕ ವಿವಿಧ ಸಂಸ್ಥೆಗಳಿಂದ ಉಲ್ಪೆ ಸಮರ್ಪಣೆ, 22ರಂದು ಬೆಳಿಗ್ಗೆ 5ಕ್ಕೆ ಪುಲ್ಲಿಕರಿಂಗಾಳಿ ದೈವ ಆಯಿರತ್ತಿರಿ ದೈವೋತ್ಸವ, ಪ್ರಸಾದ ವಿತರಣೆ, 10.30ಕ್ಕೆ ಕಾಳಪುಲಿಯನ್ ದೈವ, 11.30ಕ್ಕೆ ಕರಿಂದಿರ ನಾಯರ್ ದೈವ, ಮಧ್ಯಾಹ್ನ 12.30ಕ್ಕೆ ವೇಟಕ್ಕುರು ಮಗನ್ ದೈವ, 1ರಿಂದ 2.30ರ ತನಕ ಅನ್ನದಾನ, ಸಂಜೆ 6ಕ್ಕೆ ಶಿರಿಯ ಶ್ರೀ ಶಂಕರನಾರಾಯಣ ದೇವರ ಭೇಟಿಗೆ ಹೊರಡುವುದು, ಪುಲಿಕಂಡನ್ ದೈವ, ವಿಷ್ಣುಮೂರ್ತಿ ದೈವ, ರಾತ್ರಿ 8.30ರಿಂದ 10ರ ತನಕ ಅನ್ನದಾನ, ರಾತ್ರಿ 10ಕ್ಕೆ ಪುಲ್ಲೂರಾಳಿ ದೈವ, 23ರಂದು ಮಧ್ಯಾಹ್ನ 1ರಿಂದ 2.30ರತನಕ ಅನ್ನದಾನ, ಸಂಜೆ 4ರಿಂದ 7ರ ತನಕ ಪುಲಿಕಂಡನ್, ಕರಿಂದಿರ ನಾಯರ್, ವೇಟಕ್ಕುರು ಮಗನ್, ಕಾಳಪುಲಿಯನ್ ದೈವಗಳ ವೆಳ್ಳಾಟಂ, ಸಂಜೆ 6ಕ್ಕೆ ಕಡೇ ಕಳಿಯಾಟ ಆರಂಭ, ರಾತ್ರಿ 8.30ರಿಂದ 10ರ ತನಕ ಅನ್ನದಾನ, ರಾತ್ರಿ 8.30ಕ್ಕೆ ಹೂವಿನ ಪೂಜೆ, 9ರಿಂದ ಕೆಂಡ ಸೇವೆ, ಬಲಿ, ಬಿಂಬ ದರ್ಶನ ನಂತರ ಪುಲ್ಲೂರ್ ಕಣ್ಣನ್ ದೈವದ ವೆಳ್ಳಾಟಂ, ಪುಲೂರಾಳಿ ದೈವದ ತೋಟ್ಟಂ, ರಾತ್ರಿ 10ಕ್ಕೆ ಪುಲಿಕಂಡನ್ ದೈವ, 2.30ಕ್ಕೆ ಕರಿಂದಿರ ನಾಯರ್ ದೈವ, 3.30ಕ್ಕೆ ವೇಟಕ್ಕುರು ಮಗನ್ ದೈವ, ರಾತ್ರಿ 8ರಿಂದ 9ರ ತನಕ ವಿವಿಧ ಸಂಸ್ಥೆಗಳಿಂದ ಉಲ್ಪೆ ಮೆರವಣಿಗೆ, 24ರಂದು ಪ್ರಾತಕಾಲ 4ಕ್ಕೆ ಗುಳಿಗ ದೈವದ ಕೋಲ, 6ಕ್ಕೆ ಕಾಳಪುಲಿಯನ್ ದೈವ, 9ಕ್ಕೆ ಪುಲ್ಲೂರಾಳಿ ದೈವ, ಮಧ್ಯಾಹ್ನ 1ಕ್ಕೆ ಶ್ರೀ ವಿಷ್ಣುಮೂರ್ತಿ ಮತ್ತು ಹೂಮುಡಿ ಉತ್ಸವ, 1ರಿಂದ 3ರ ತನಕ ಅನ್ನದಾನ, ರಾತ್ರಿ 7ಕ್ಕೆ ಭಂಡಾರ ಅವರೋಹಣ, ರಾತ್ರಿ 8.30ರಿಂದ 10ರ ತನಕ ಅನ್ನದಾನ ನಡೆಯಲಿದೆ.