ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ 374 ಕೋವಿಡ್ ಸಾವು ವರದಿಯಾಗಿವೆ. ಕೋವಿಡ್ ಪೀಡಿತ ಅಮೆರಿಕ, ಬ್ರೆಜಿಲ್, ರಷ್ಯಾ ಮತ್ತು ಮೆಕ್ಸಿಕೊದಂತಹ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತ್ಯಂತ "ಕಡಿಮೆ" ಸಾವು ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
ಈ ಕುರಿತು ಇಂದು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಅವರು, ಕೆಲವೊಮ್ಮೆ ಭಾರತವು ವರದಿ ಮಾಡಿದ ಅಔಗಿIಆ-19 ಸಾವುಗಳ ಅಧಿಕೃತ ಸಂಖ್ಯೆಗಿಂತ ಹೆಚ್ಚಾಗಿದೆ ಎಂದು ಕೆಲವರು ವರದಿ ಮಾಡಿದ್ದರು ಎಂದು ಹೇಳಿದ್ದಾರೆ.
"ಈ ವರದಿಗಳು ಹೆಚ್ಚಾಗಿ ಮೌಲ್ಯೀಕರಿಸದ ವಿಧಾನಗಳ ಮೇಲೆ ಅವಲಂಬಿತವಾಗಿವೆ ಅಥವಾ ಮಾಹಿತಿ ಪಡೆಯಲು ಬಳಸುವ ಡೇಟಾ ಮೂಲಗಳು ವಿಶ್ವಾಸಾರ್ಹವಲ್ಲ. ಈ ಹೆಚ್ಚಿನ ಅಧ್ಯಯನಗಳಲ್ಲಿ, ಸಣ್ಣ ಜನಸಂಖ್ಯೆಯ ಸೀಮಿತ ಮಾದರಿಯಿಂದ ಫಲಿತಾಂಶಗಳನ್ನು ನೀಡಲಾಗಿದೆ ಮತ್ತು ಅದನ್ನು ಇಡೀ ದೇಶಕ್ಕೆ ಅನ್ವಸಲಾಗಿದೆ" ಸಚಿವರು ತಿಳಿಸಿದ್ದಾರೆ.
"ವಿಶ್ವ ಆರೋಗ್ಯ ಸಂಸ್ಥೆ(Who)ಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಭಾರತವು ಪ್ರತಿ ಮಿಲಿಯನ್‌ಗೆ ಕಡಿಮೆ ಸಾವುಗಳನ್ನು ಹೊಂದಿದೆ(ಪ್ರತಿ ಮಿಲಿಯನ್ ಜನಸಂಖ್ಯೆಗೆ 374 ಸಾವುಗಳು). ಇದು ಅಮೆರಿಕದಂತಹ(ಪ್ರತಿ ಮಿಲಿಯನ್‌ಗೆ 2,920 ಸಾವುಗಳು) ಕೋವಿಡ್ ಪೀಡಿತ ದೇಶಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಬ್ರೆಜಿಲ್ (ಪ್ರತಿ ಮಿಲಿಯನ್ ಜನಸಂಖ್ಯೆಗೆ 3,092 ಸಾವುಗಳು), ರಷ್ಯಾ (ಪ್ರತಿ ಮಿಲಿಯನ್ ಜನಸಂಖ್ಯೆಗೆ 2,506 ಸಾವುಗಳು) ಮತ್ತು ಮೆಕ್ಸಿಕೋ(ಪ್ರತಿ ಮಿಲಿಯನ್ ಜನಸಂಖ್ಯೆಗೆ 2,498 ಸಾವುಗಳು)"ದಲ್ಲಿ ಹೆಚ್ಚು ಸಾವುಗಳು ವರದಿಯಾಗಿವೆ ಎಂದು ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.