ಕೋವಿಡ್ 19 ಸೋಂಕಿನಿಂದ ಚೇತರಿಸಿದವರಿಗೆ ಮಧುಮೇಹದ ಆತಂಕ ಉಂಟಾಗಿತ್ತು. ಹೌದು, ಕೋವಿಡ್ 19 ಸೋಂಕಿನಿಂದ ಚೇತರಿಸಿದವರಲ್ಲಿ ಅನೇಕರಿಗೆ ಮಧುಮೇಹ ಸಮಸ್ಯೆ ಕಂಡು ಬಂದಿತ್ತು. ಆದರೆ ಹಾಗೆ ಉಂಟಾಗಿದ್ದರೆ ಭಯ ಪಡಬೇಕಾಗಿಲ್ಲ, ಅದರಿಂದ ಗುಣಮುಖರಾಗುವಿರಿ ಎಂದು ಎಂಜಿಹೆಚ್(Massachusetts General Hospita)ಹೇಳಿರುವುದರಿಂದ ಹೆಚ್ಚಿನವರಿಗೆ ಸಮಧಾನ ಉಂಟಾಗಿದೆ.
ಎಂಜಿಹೆಚ್ ಆಸ್ಪತ್ರೆ ಅಧ್ಯಯನ ನಡೆಸಿ ಈ ವರದಿ ನೀಡಿದೆ. ಆ ವರದಿ ಪ್ರಕಾರ ಕೋವಿಡ್ 19 ಸೋಂಕಿನ ಬಳಿಕ ಕಾಣಿಸಿಕೊಳ್ಳುವ ಮಧುಮೇಹ ಶಾಶ್ವತವಲ್ಲ ಎಂದು ಹೇಳಿದೆ.
ಕೋವಿಡ್-19 ಬಳಿಕ ಮಧುಮೇಹಕ್ಕೆ ಕಾರಣವೇನು?
ಕೋವಿಡ್ 19 ಸೋಂಕು ತಗುಲಿದಾಗ ಹೆಚ್ಚಿನವರು ಅತ್ಯಧಿಕ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇದರಿಂದಾಗಿ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಿರುತ್ತದೆ. ಈ ರೀತಿ ಬಂದ ಮಧುಮೇಹ ಶಾಶ್ವತವಾಗಿ ಉಳಿಯುವುದಿಲ್ಲ. ಸ್ವಲ್ಪ ಸಮಯದ ಬಳಿಕ ಸರಿಹೋಗುವುದು.
ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಲು ಸ್ಟಿರಾಯ್ಡ್ ಕೂಡ ಕಾರಣ ಕೋವಿಡ್ 19 ವೈರಸ್ ತಗುಲಿದಾಗ ರೋಗಿಗಳು ಬೇಗನೆ ಚೇತರಿಸಿಕೊಳ್ಳುವಂತೆ ಮಾಡಲು ಸ್ಟಿರಾಯ್ಡ್ ನೀಡಲಾಗುತ್ತಿತ್ತು. ಇದು ಕೂಡ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗಲು ಎಂದು ಕಾರಣ ಎಂಬುವುದನ್ನು ತಜ್ಞರು ಹೇಳಿದ್ದಾರೆ.
ಕೆಲವರಿಗೆ ಮಧುಮೇಹ ಇದೆ ಎಂಬುವುದು ಕೋವಿಡ್ ಚಿಕಿತ್ಸೆ ಸಮಯದಲ್ಲಿ ಗೊತ್ತಾಗಿದ್ದು ಕೆಲವರಲ್ಲಿ ಕೋವಿಡ್ 19ನ ಬಳಿಕ ಮಧುಮೇಹ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಅದಕ್ಕಿಂತ ಮೊದಲೇ ಇತ್ತು, ಆದರೆ ಅವರು ಪರೀಕ್ಷೆ ಮಾಡಿರಲಿಲ್ಲ, ಕೋವಿಡ್ 19ಗೆ ಚಿಕಿತ್ಸೆ ನೀಡುವಾಗ ಅವರಿಗೆ ಮಧುಮೇಹ ಇರುವುದು ತಿಳಿದುಬಂತು
ಕೋವಿಡ್ 19 ನಂತರ ಬಂದ ಮಧುಮೇಹ ಕಡಿಮೆಯಾಗಬಹುದು ಕೋವಿಡ್ 19 ನಂತರ ಮಧುಮೇಹ ಬಂದರೆ ಕೆಲವರಿಗೆ ಮೆಡಿಷನ್ ಮೂಲಕ ಇನ್ನು ಕೆಲವರಿಗೆ ಇನ್ಸುಲಿನ್ ಮೂಲಕ ಚಿಕಿತ್ಸೆ ನೀಡಲಾಗುವುದು. ಇದರಲ್ಲಿ ಹೆಚ್ಚಿನವರಿಗೆ ಮಧುಮೇಹ ನಿಯಂತ್ರಣಕ್ಕೆ ಬಂದು ಮುಂದೆ ಚಿಕಿತ್ಸೆ ಅಗ್ಯತವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ ಕೆಲವರಿಗೆ ಮಧುಮೇಹ ಚಿಕಿತ್ಸೆ ಮುಂದುರೆಸಬೇಕಾಗುತ್ತದೆ. ಅದರ ಕುರಿತು ವೈದ್ಯರು ಪರಿಶೀಲಿಸಿ ಮಾಹಿತಿ ನಿಡುತ್ತಾರೆ.