ನೋಯ್ಡಾ: ಮಧ್ಯರಾತ್ರಿ ರಸ್ತೆಯ ಬದಿ ವೇಗವಾಗಿ ಓಡುತ್ತಿದ್ದ ಯುವಕನೋರ್ವನಿಗೆ ಕಾರು ಚಾಲಕ ಲಿಫ್ಟ್ ಕೊಡುತ್ತೇನೆಂದರೂ ಆತನ ಪ್ರಸ್ತಾವವನ್ನು ತಿರಸ್ಕರಿಸಿ ಓಟ ಮುಂದುವರಿಸಿರುವ ಮತ್ತು ತನ್ನ ಓಟಕ್ಕೆ ಕಾರಣಗಳನ್ನು ನೀಡಿದ ವೀಡಿಯೊವೊಂದು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.

ಸೇನೆಗೆ ಸೇರುವ ಸಲುವಾಗಿ ತನ್ನ ಕೆಲಸದಿಂದ ಮರಳುವ ವೇಳೆ ಸುಮಾರು ೧೦ ಕಿ.ಮೀನಷ್ಟು ಓಡುವ ೧೯ರ ಹರೆಯದ ಉತ್ತರಾಖಂಡ ಮೂಲದ ಪ್ರದೀಪ್ ಮೆಹ್ರಾ ಎಂಬ ಯುವಕನ ವೀಡಿಯೊವನ್ನು ಸಿನಿಮಾ ನಿರ್ಮಾಪಕ ವಿನೋದ್ ಕಾಪ್ರಿ ಚಿತ್ರೀಕರಿಸಿ ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.
"ನಾನು ಮೆಕ್ ಡೊನಾಲ್ಡ್ ನಲ್ಲಿ ನನ್ನ ಕೆಲಸ ಮುಗಿಸಿ ದಿನಂಪ್ರತೀ ಓಡುತ್ತೇನೆ. ನನಗೆ ಸೇನೆಗೆ ಸೇರಬೇಕೆಂಬ ಸಂಕಲ್ಪವಿರುವ ಕಾರಣ ಈ ರೀತಿ ಓಡುತ್ತೇನೆ" ಎಂದಾಗ, ನಿನಗೆ ಬೆಳಗ್ಗಿನ ಸಮಯದಲ್ಲಿ ಓಡಬಹುದಲ್ಲವೇ ಎಂದು ಕಾರಿನಲ್ಲಿದ್ದ ವ್ಯಕ್ತಿ ಪ್ರಶ್ನಿಸಿದಾಗ, "ಇಲ್ಲ ಬೆಳಗ್ಗಿನ ವೇಳೆ ನನಗೆ ಕೆಲಕ್ಕೆ ತೆರಳಲಿದೆ ಅದಕ್ಕೂ ಮುಂಚೆ ಆಹಾರ ತಯಾರಿಸಬೇಕಾಗಿದೆ. ನನ್ನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ" ಎಂದು ಯುವಕ ಹೇಳುವುದು ವೀಡಿಯೋದಲ್ಲಿ ಸೆರೆಯಾಗಿದೆ ಮತ್ತು ನೋಡುಗರ ಮನಗೆದ್ದಿದೆ.
"ನನ್ನೊಂದಿಗೆ ಊಟ ಮಾಡಲು ಬಾ" ಎಂದು ವಿನೋದ್ ಕಾಪ್ರಿಯವರು ಆಹ್ವಾನಿಸಿದಾಗ, ಇಲ್ಲ ನನ್ನ ತಮ್ಮ ಹಸಿವಿನಿಂದಲೇ ಇರುತ್ತಾನೆ ನಾನು ನಿಮ್ಮೊಂದಿಗೆ ಬಂದರೆ ಎಂದು ಯುವಕ ಹೇಳುತ್ತಾನೆ. ಸದ್ಯ ಈ ವೀಡಿಯೊ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.