ಮುಳ್ಳೇರಿಯ: ಆದೂರು ಶ್ರೀ ಭಗವತೀ ಕ್ಷೇತ್ರದ ನಡಾವಳೀ ಮಹೋತ್ಸವವು ಏ.1ರಿಂದ 4ರ ತನಕ ನಾನಾ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಾ.27ರಂದು ಬೆಳಿಗ್ಗೆ 7ಕ್ಕೆ ಗೊನೆ ಮುಹೂರ್ತ, ಏ.1ರಂದು ಸಾಯಂ 4ಕ್ಕೆ ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಸಾಯಂ 6ಕ್ಕೆ ಸಾಮೂಹಿಕ ಪ್ರಾರ್ಥನೆ, ದೀಪ ಪ್ರತಿಷ್ಠೆ, ಸಾಯಂ. 6.15ಕ್ಕೆ ದೀಪಾರಾಧನೆ, ಭಜನೆ ನಡೆಯಲಿದೆ.
ಏ.2ರಂದು ಬೆಳಿಗ್ಗೆ 8ಕ್ಕೆ ಶ್ರೀ ಭಗವತೀ ಅಮ್ಮನವರ ಭಂಡಾರ ಚಾವಡಿಯಿಂದ ಶ್ರೀ ಕ್ಷೇತ್ರಕ್ಕೆ ಹೊರಡುವುದು, 9ಕ್ಕೆ ಶ್ರೀ ಭೂತಬಲಿ ಮಹೋತ್ಸವ ಆರಂಭ, 10.30ಕ್ಕೆ ಶ್ರೂ ಭಗವತೀ ದರ್ಶನ ಸಮೇತ ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರಕ್ಕೆ ಭೇಟಿಯೊಂದಿಗೆ ದೇವ ಸಮಾಗಮ, ಮಧ್ಯಾಹ್ನ 1.30ಕ್ಕೆ ಶ್ರೀ ಭಗವತಿಗಳು ಸ್ವಕ್ಷೇತ್ರಕ್ಕೆ ನಿರ್ಗಮನ, ಆಚಾರ ಅನುಷ್ಠಾನ, ಅನ್ನದಾನ, ಸಾಯಂ. 5ಕ್ಕೆ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅವರಿಗೆ ಪೂರ್ಣಕುಂಭ ಸ್ವಾಗತ, 6.15ಕ್ಕೆ ದೀಪಾರಾಧನೆ, ಭಜನೆ ಶ್ರೀ ಗುತ್ಯಮ್ಮ ಭಜನಾ ಮಂಡಳಿ ಐಲ ಇವರಿಂದ, 7.15ಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತೆ ಪಲ್ಲವಿ ಪ್ರಭು ಮತ್ತು ಬಳಗ ಮಂಗಳೂರು ಇವರಿಂದ ಭಜನೆ, ರಾತ್ರಿ 8ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 9.30ಕ್ಕೆ ಡೋಕ್ಯುಮೆಂಟರಿ ವೀಡಿಯೋ ಪ್ರದರ್ಶನ, 10.30ಕ್ಕೆ ಓಂ ಭಗವತೀ ಯುವಜನ ಸಂಘ ನೆಲ್ಲಿಕುನ್ನು ಇವರಿಂದ ಆರ್ಕೆಸ್ಟ್ರಾ "ಸೈನಿಂಗ್ ಬಡ್ರ್ಸ್", 12ಕ್ಕೆ ಹೂವಿನ ಪೂಜೆ, 12.30ರಿಂದ ನಡಾವಳಿ ಮಹೋತ್ಸವ ಆರಂಭ, ಮೇಲೆರಿಗೆ ಅಗ್ನಿ ಸ್ಪರ್ಶ, ಪ್ರಾತಃಕಾಲ 3ಕ್ಕೆ ಶ್ರೀ ಭಗವತೀ ಅಮ್ಮನವರ ಮತ್ತು ದೈವಗಳ ದರ್ಶನದೊಂದಿಗೆ ಬೆಡಿಕಟ್ಟೆಗೆ ಹೋಗುವುದು, ಸಿಡಿಮದ್ದು ಪ್ರಯೋಗ, ಶ್ರೀ ಭಗವತಿಗಳ ನೃತ್ಯಾ ನರ್ತನ ಮತ್ತು ಬಿಂಬಬಲಿ ನಡೆಯಲಿದೆ. ಏ.3ರಂದು ಬೆಳಿಗ್ಗೆ 6ಕ್ಕೆ ಕೆಂಡಸೇವೆ, ಪ್ರಸಾದ ವಿತರಣೆ, ಅನ್ನದಾನ, ಏ.4ರಂದು ಬೆಳಿಗ್ಗೆ 8 ಗಂಟೆಗೆ ನಾಗತಂಬಿಲ, 11ಕ್ಕೆ ಭಂಡಾರ ಚಾವಡಿಗೆ ಭಂಡಾರ ಆಗಮನ ನಡೆಯಲಿದೆ.