ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.2, 3 ಮತ್ತು 4 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಲಿದೆ.
ಮಾ.2 ರಂದು ಸಂಜೆ 5 ಕ್ಕೆ ಹೊರೆ ಕಾಣಿಕೆ ಮೆರವಣಿಗೆ, 5.30 ಕ್ಕೆ ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಕೆ.ಯು.ದಾಮೋದರ ತಂತ್ರಿ, ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ, ಬಳಿಕ ಧಾರ್ಮಿಕ ಸಭೆ ನಡೆಯಲಿದೆ. 6 ಕ್ಕೆ ಉಗ್ರಾಣ ಮುಹೂರ್ತ, 7 ರಿಂದ ಸಾಮೂಹಿಕ ಪ್ರಾರ್ಥನೆ, ಪಶು ಪುಣ್ಯಾಹ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ರಾತ್ರಿ ಪೂಜೆ ನಡೆಯಲಿದೆ. ರಾತ್ರಿ 7 ರಿಂದ ಭರವಸೆಯ ಬೆಳಕು ಸಮನ್ವಿತಾ ಗಣೇಶ್ ಅಣಂಗೂರು ಅವರಿಂದ ಭಕ್ತಿಗಾನಾರ್ಚನೆ ನಡೆಯುವುದು.
ಮಾ.3 ರಂದು ಬೆಳಗ್ಗೆ 5.30 ಕ್ಕೆ ಅಭಿಷೇಕ, ಗಣಪತಿ ಹೋಮ, ತ್ರಿಕಾಲ ಪೂಜೆ, ಉಷಾ ಪೂಜೆ, ಬಿಂಬಶುದ್ಧಿ, ಕಲಶಾಭಿಷೇಕ, ಘನನಾದಿ ಸ್ಥಳ ಶುದ್ಧಿ, ಅನುಜ್ಞಾ ಕಲಶ ಪೂಜೆ, ಶಯ್ಯಪೂಜೆ, ಅನುಜ್ಞಾ ಕಲಶಾಭಿಷೇಕ, ಸೂರ್ಯೋದಯದಿಂದ ಸೂರ್ಯಾಸ್ತಮಾನದ ವರೆಗೆ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ಅಂಖಂಡ ದಾಸ ಸಂಕೀರ್ತನೆ, ಬೆಳಗ್ಗೆ 9 ಕ್ಕೆ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರಿಂದ ಆಶೀರ್ವಚನ, ಸಂಜೆ 6 ರಿಂದ ಧಾರ್ಮಿಕ ಸಭೆ, ದೀಪಾರಾಧನೆ, ಕುಂಭೇಶ ಕರ್ಕರಿ ಪೂಜೆ, ಬ್ರಹ್ಮ ಕಲಶಪೂಜೆ, ಅಧಿವಾಸ ಹೋಮ, ಧ್ಯಾನನಾಧಿವಾಸ ಕಲಶಾಭಿಷೇಕ, ತ್ರಿಕಾಲ ಪೂಜೆ, ರಾತ್ರಿ ಪೂಜೆ, ರಾತ್ರಿ 8 ರಿಂದ ಜಯಶ್ರೀ ದಿವಾಕರ ಬಳಗದವರಿಂದ ನೃತ್ಯ ಗಾನ ವೈಭವ ನಡೆಯುವುದು.
ಮಾ.4 ರಂದು ಬೆಳಗ್ಗೆ 7.30 ರಿಂದ 9 ರ ವರೆಗೆ ಮೀನಲಗ್ನ ಮುಹೂರ್ತದಲ್ಲಿ ಅಷ್ಟಬಂಭ ಬ್ರಹ್ಮಕಲಶೋತ್ಸವ, ಮಹಾನ್ನ ಸಂತರ್ಪಣೆ ನಡೆಯುವುದು. ಸಂಜೆ 3 ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡುವರು. ರಾತ್ರಿ 7 ರಿಂದ ನಾಗರಕಟ್ಟೆ ಮಿತ್ರ ಕೂಟದಿಂದ ನೃತ್ಯಗಾನ ವೈಭವ ನಡೆಯಲಿದೆ.