ಕೀವ್: ಯುದ್ಧಪೀಡಿತ ಉಕ್ರೇನ್ ನಿಂದ ಇದುವರೆಗೂ 20 ಲಕ್ಷ ಮಂದಿ ನಾಗರಿಕರು ದೇಶ ತೊರೆದಿರುವುದಾಗಿ ವರದಿ ತಿಳಿಸಿದೆ.
ಮಂಗಳವಾರ ಮಾನವೀಯ ನೆಲೆಯಲ್ಲಿ ತೆರೆಯಲಾಗಿದ್ದ ಕಾರಿಡಾರ್ ನಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಬಸ್ಸುಗಳಲ್ಲಿ ಉಕ್ರೇನ್ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.
ಹಲವು ನಗರಗಳಲ್ಲಿ ಆಹಾರ, ನೀರು. ಔಷಧಗಳ ಕೊರತೆ ತಲೆದೋರಿದ್ದು ಜನರು ವಲಸೆ ಹೊರಡಲು ಪ್ರಮುಖವಾಗಿ ಇದೇ ಕಾರಣವಾಗಿದೆ.