ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದ ವಾರಿಯಲ್ಲಿರುವ 222 ಲಾಲ್ ಮೋಹನ್ ಸಹಾ ಸ್ಟ್ರೀಟ್ನಲ್ಲಿರುವ ಇಸ್ಕಾನ್ ರಾಧಾಕಾಂತ ದೇವಸ್ಥಾನದ ಮೇಲೆ ಸುಮಾರು 200 ಮಂದಿ ದಾಳಿ ಮಾಡಿ, ಹಾನಿಗೊಳಿಸಿರುವುದಲ್ಲದೆ, ದೇವಸ್ಥಾನವನ್ನು ಲೂಟಿ ಮಾಡಿರುವುದು ವರದಿಯಾಗಿದೆ.

ಗುರುವಾರ ಈ ಘಟನೆ ನಡೆದಿದೆ. ದಾಳಿಯಲ್ಲಿ ಸುಮಂತ್ರ ಚಂದ್ರ, ಶ್ರವಣ್, ನಿಹಾರ್ ಹಲ್ದಾರ್, ರಾಜೀವ್ ಭದ್ರ ಸೇರಿದಂತೆ ಅನೇಕ ಜನರು ಗಾಯಗೊಂಡಿದ್ದಾರೆ. ಹಾಜಿ ಸಫಿಉಲ್ಲಾ ನೇತೃತ್ವದ ಗುಂಪೊಂದು ಈ ಕೃತ್ಯವನ್ನು ಎಸಗಿದ್ದಾರೆಂದು ತಿಳಿದುಬಂದಿದೆ.
ಕಳೆದ ವರ್ಷ ಬಾಂಗ್ಲಾದೇಶದ ಕೊಮಿಲ್ಲಾ ಪಟ್ಟಣದ ನನುವಾರ್ ದಿಘಿ ಸರೋವರದ ಬಳಿಯ ದುರ್ಗಾ ಪೂಜೆ ವೇಳೆ ಕುರಾನ್ ಅನ್ನು ಅಪವಿತ್ರಗೊಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಡಿದ ಬೆನ್ನಲ್ಲೇ ಉಂಟಾದ ಹಿಂಸಾಚಾರದಲ್ಲಿ ಕನಿಷ್ಠ ಮೂವರನ್ನು ಕೊಲ್ಲಲಾಗಿತ್ತು.
ಈ ಹಿಂದೆ, ಢಾಕಾದ ಟಿಪ್ಪು ಸುಲ್ತಾನ್ ರಸ್ತೆ ಮತ್ತು ಚಿತ್ತಗಾಂಗ್‌ನ ಕೊಟ್ವಾಲಿಯಲ್ಲಿಯೂ ಇದೇ ರೀತಿಯ ಘಟನೆಗಳು ವರದಿಯಾಗಿದ್ದವು.