ಕಾಸರಗೋಡು: ಗಡಿ ಗ್ರಾಮ ನೆಟ್ಟಣಿಗೆಯ ಗ್ರಾಮಾಧಿಕಾರಿಯೂ, ತಿರುವನಂತಪುರ ನಿವಾಸಿಯೂ ಆದ ಎಸ್.ಎಲ್.ಸೋನಿ (45) ಮತ್ತು ಅಡೂರು ನಿವಾಸಿ ಸ್ವೀಪರ್ ಶಿವಪ್ರಸಾದ್ (37) ಅವರನ್ನು ನಾಟಕೀಯ ವಿದ್ಯಮಾನದಲ್ಲಿ ಕಾಸರಗೋಡು ವಿಜಿಲೆನ್ಸ್ ಡಿವೈಎಸ್ಪಿ ಕೆ.ವಿ.ವೇಣುಗೋಪಾಲನ್ ನೇತೃತ್ವದ ತಂಡವು ಬಂಧಿಸಿದೆ. ನೆಟ್ಟಣಿಗೆ ಗ್ರಾಮ ಕಚೇರಿಯಲ್ಲಿ ಶನಿವಾರ ಸಂಜೆ ನಾಟಕೀಯ ಘಟನೆ ನಡೆದಿದೆ.
ಏನಪ್ಪಾ ಅಂದ್ರೆ:
ಅಡೂರು ಕೈತೋಡು ಮೂಲದ ಅಬ್ದುಲ್ ರೆಹಮಾನ್ ಗ್ರಾಮ ಕಚೇರಿಯಲ್ಲಿ ಲಂಚ ಪಡೆದ ಘಟನೆಯನ್ನು ಹೊರ ತಂದಿದ್ದಾರೆ. ಅಬ್ದುಲ್ ರೆಹಮಾನ್ ಎಂಬುವರು ಕಳೆದ ತಿಂಗಳು ಮನೆ ಕಟ್ಟಲು ಹಕ್ಕುಪತ್ರ ಪ್ರಮಾಣ ಪತ್ರಕ್ಕಾಗಿ ಗ್ರಾಮ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇದ್ದ ಶೆಡ್ ಕೆಡವಿದಾಗ ಪಂಚಾಯತ್ ಅಧಿಕಾರಿಗಳು ಅಬ್ದುಲ್ ರೆಹಮಾನ್ ಅವರಿಗೆ ಸ್ವಾಧೀನ ಪ್ರಮಾಣ ಪತ್ರ ನೀಡುವಂತೆ ತಿಳಿಸಿದ್ದರು. ನಂತರ ಗ್ರಾಮಾಧಿಕಾರಿ ಬಳಿಗೆ ಬಂದರು.
ಪ್ರಮಾಣಪತ್ರಕ್ಕಾಗಿ ಕೆಲವು ಔಪಚಾರಿಕತೆಗಳು:
ಸ್ವಾಧೀನ ಪ್ರಮಾಣ ಪತ್ರ ಪಡೆಯಲು ಒಂದು ತಿಂಗಳು ಬೇಕಾಗುತ್ತದೆ ಎಂದು ಗ್ರಾಮಾಧಿಕಾರಿ ಅಬ್ದುಲ್ ರಹಮಾನ್ ಅವರಿಗೆ ತಿಳಿಸಿದ್ದರು. ಸ್ವೀಪರ್ ಶಿವಪ್ರಸಾದ್ ಅಬ್ದುಲ್ ರೆಹಮಾನ್ ಅವರನ್ನು ಖಾಸಗಿಯಾಗಿ ಕರೆಸಿ, ಬೇಗ ಸಿಗಬೇಕಾದರೆ ಇಲ್ಲಿ ಒಂದಿಷ್ಟು ಮಾಮೂಲಗಳಿವೆ, ತಯಾರಾದ ಕೂಡಲೇ ಕೊಡುವುದಾಗಿ ಹೇಳಿದರು. ಆಗ ಏನು ಮಾಡುವುದು ಎಂದು ಕೇಳಿದಾಗ ರೂ.2000 ಮತ್ತು ನೆಪೋಲಿಯನ್ ವಿದೇಶಿ ಮದ್ಯದ ಫುಲ್ ಬಾಟಲ್ ತರಲು ಹೇಳಿದರು.
ವಿಜಿಲೆನ್ಸ್ ಸಹಾಯ ಯಾಚನೆ:
ಅರ್ಜಿ ಸಲ್ಲಿಸಿದ 25 ದಿನಗಳ ನಂತರ ಅಬ್ದುಲ್ ರೆಹಮಾನ್ ಗ್ರಾಮ ಕಚೇರಿಗೆ ಆಗಮಿಸಿದ್ದರು. ಆದರೆ ಸ್ವಾಧೀನ ಪ್ರಮಾಣ ಪತ್ರ ಸಿದ್ಧಪಡಿಸಿರಲಿಲ್ಲ. ಈ ಬಗ್ಗೆ ಅಬ್ದುಲ್ ರೆಹಮಾನ್ ಸ್ವೀಪರ್ ಬಳಿ ಕೇಳಿದಾಗ ಲಂಚದ ಬಗ್ಗೆ ನೆನಪಿಸಿದರು.ಬಳಿಕ ಸ್ಥಳೀಯ ಸ್ನೇಹಿತರ ಮೂಲಕ ವಿಜಿಲೆನ್ಸ್‌ಗೆ ಮಾಹಿತಿ ನೀಡಲಾಯಿತು. ವಿಜಿಲೆನ್ಸ್ ಸೂಚನೆಯಂತೆ ಹಣ ಪಾವತಿಸಲು ಕಚೇರಿಗೆ ತೆರಳಿದ್ದರು. ಆಗ ಗ್ರಾಮ ಅಧಿಕಾರಿ ಸ್ವೀಪರ್ ಮೂಲಕ ರಸ್ತೆ ಬದಿ ಹಣ ನೀಡುವಂತೆ ಸೂಚಿಸಿದರು. ಬೈಕ್‌ನಲ್ಲಿ ಸ್ವೀಪರ್ ವಿಜಿಲೆನ್ಸ್ ನೀಡಿದ್ದ ಫಿನಾಲ್ಫ್ತಾಲಿನ್ ಲೇಪಿತ ಹಣವನ್ನು ನೀಡುತ್ತಿದ್ದಾಗ ಗುಪ್ತದಳದ ಸಿಬ್ಬಂದಿ ಇಬ್ಬರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ವಿಚಾರಣೆ ವೇಳೆ ಹಣ ತೆಗೆದುಕೊಂಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿಗಳು ನ್ಯಾಯಾಲಯಕ್ಕೆ: