ನವದೆಹಲಿ: ದೇಶದಲ್ಲಿ 2016ರಿಂದ 2020ರವರೆಗೆ ಕೋಮುಗಲಭೆಗಳಿಗೆ ಸಂಬಂಧಿಸಿದಂತೆ ಸುಮಾರು 3,400 ಪ್ರಕರಣಗಳು ದಾಖಲಾಗಿವೆ.
ಇದೇ ಅವಧಿಯಲ್ಲಿ ಗಲಭೆಗೆ ಸಂಬಂಧಿಸಿದಂತೆ 2.76 ಲಕ್ಷ ಪ್ರಕರಣಗಳು ದಾಖಲಾಗಿವೆ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿ (ಎನ್‌ಸಿಆರ್‌ಬಿ) ಮಾಹಿತಿ ಆಧರಿಸಿ, ಕೋಮು ಅಥವಾ ಧಾರ್ಮಿಕ ಗಲಭೆಗೆ ಸಂಬಂಧಿಸಿದಂತೆ 2020ರಲ್ಲಿ 857, 2019ರಲ್ಲಿ 438, 2018ರಲ್ಲಿ 512, 2017ರಲ್ಲಿ 723 ಮತ್ತು 2016ರಲ್ಲಿ 869 ಪ್ರಕರಣಗಳು ದಾಖಲಾಗಿವೆ ಎಂದು ಸಚಿವರು ವಿವರಿಸಿದ್ದಾರೆ.