HEALTH TIPS

2021ರಲ್ಲಿ 14 ಲಕ್ಷಕ್ಕೂ ಹೆಚ್ಚು ಸೈಬರ್ ದಾಳಿ ನಡೆದಿವೆ!

             ನವದೆಹಲಿ: 2021ರಲ್ಲಿ 14 ಲಕ್ಷಕ್ಕೂ ಹೆಚ್ಚು ಸೈಬರ್ ಭದ್ರತಾ ಘಟನೆಗಳು ಸಂಭವಿಸಿರುವುದರ ಬಗ್ಗೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್ ಟಿ-ಇನ್) ಗಮನಿಸಿದೆ ಎಂದು ಸರ್ಕಾರ ಶುಕ್ರವಾರ ರಾಜ್ಯಸಭೆಗೆ ತಿಳಿಸಿದೆ.

                 CERT-In  ಎನ್ನುವುದು ಕಂಪ್ಯೂಟರ್ ಭದ್ರತಾ ಘಟನೆಗಳು ಸಂಭವಿಸಿದಾಗ ಅವುಗಳಿಗೆ ಪ್ರತಿಕ್ರಿಯಿಸುವ ರಾಷ್ಟ್ರೀಯ ನೋಡಲ್ ಏಜೆನ್ಸಿಯಾಗಿದೆ.

           2021ರಲ್ಲಿ ಒಟ್ಟು 14,02,809 ಸೈಬರ್ ಭದ್ರತಾ ಘಟನೆಗಳನ್ನು ಗಮನಿಸಲಾಗಿದೆ ಎಂದು ಸಿಇಆರ್ಟಿ-ಇನ್ ವರದಿ ಮಾಡಿದೆ” ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

           ಸಿಇಆರ್ ಟಿ-ಇನ್ ಪ್ರಕಾರ, ಇ-ಕಾಮರ್ಸ್, ಇಂಧನ, ಹಣಕಾಸು, ಸರ್ಕಾರ, ಆರೋಗ್ಯ, ಐಟಿ, ಉತ್ಪಾದನೆ, ಟೆಲಿಕಾಂ ಮತ್ತು ಸಾರಿಗೆಯಂತಹ ವಿವಿಧ ಕ್ಷೇತ್ರಗಳಲ್ಲಿ ಸೈಬರ್ ಭದ್ರತಾ ಘಟನೆಗಳನ್ನು ಗಮನಿಸಲಾಗಿದೆ ಎಂದು ಚಂದ್ರಶೇಖರ್ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries